ಗದಗ: ಇತ್ತೀಚಿಗೆ ಸವದತ್ತಿ ಎಲ್ಲಮ್ಮ ಗುಡ್ಡದ ಪ್ರದೇಶದಲ್ಲಿ ಈಜಲು ಹೋಗಿ ಮೃತರಾದ ನಗರದ ತಳಗೇರಿ ಓಣಿಯ ಬಾಲಕರಾದ ಸಚ್ಚಿದಾನಂದ ಕಟ್ಟಿಮನಿ ಹಾಗೂ ವೀರೇಶ ಕಟ್ಟಿಮನಿ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮೃತರ ಕುಟುಂಬಸ್ಥರಿಗೆ ಸರ್ಕಾರದ ಪರವಾಗಿ ತಲಾ ಮೂರು ಲಕ್ಷ ರೂಗಳ ಚೆಕ್ ಗಳನ್ನು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಬಾಳಿ ಬದುಕಿ ಜೀವನವನ್ನು ರೂಪಿಸಿಕೊಳ್ಳಬೇಕಾಗಿದ್ದ ಬಾಲಕರ ಸಾವು ಅಘಾತ ತಂದಿದೆ. ಬೆಲೆ ಕಟ್ಟಲಾಗದ ಜೀವವನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ದೇವರು ನೋವನ್ನು ಸಹಿಸುವ ಶಕ್ತಿ ನೀಡಲಿ. ಇಂತಹ ಕಷ್ಟದ ಸಮಯದಲ್ಲಿ ಸರ್ಕಾರ ಸದಾ ನಿಮ್ಮೊಂದಿಗೆ ಇದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ತಹಶೀಲ್ದಾರ, ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ನಗರಸಭೆ ಸದಸ್ಯರಾದ ಕೃಷ್ಣಾ ಪರಾಪುರ್ ಕೆಡಿಪಿ ಸದಸ್ಯರಾದ ಎಸ್. ಎನ್. ಬಳ್ಳಾರಿ, ಬಿ. ಬಿ.ಅಸೂಟಿ,ವಿಜಯ ಕಲ್ಮನಿ, ಅಶೋಕ ಮಂದಾಲಿ ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು