ಕಂಪ್ಲಿಯ ಸಮುದಾಯ ಆರೋಗ್ಯ ಕೇಂದ್ರದಿಂದ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿಜಾಥಾಕ್ಕೆ ಪುರಸಭೆ ಸದಸ್ಯೆ ಗುಡದಮ್ಮ ಶ್ರೀನಿವಾಸ ಚಾಲನೆ ನೀಡಿದರು. ಆಡಳಿತ ವೈದ್ಯಾಧಿಕಾರಿ ರವೀಂದ್ರ ಕನಕೇರಿ, ಸಿಎಚ್‌ಸಿ ವೈದ್ಯರಾದ ಡಾ.ಮಲ್ಲೇಶಪ್ಪ, ಡಾ.ಶ್ರೀನಿವಾಸ, ಡಾ.ಗವಿರಾಜ, ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಇತರರಿದ್ದರು. 
ಜಿಲ್ಲೆ

ಎಚ್‌ಐವಿ ಸೋಂಕಿನಿಂದ ದೂರವಿರಿ

Kopala - Desk - Eraveni

ಕಂಪ್ಲಿ: ಏಡ್ಸ್ ಸೋಂಕಿನಿಂದ ದೂರವಿರಲು ಪ್ರತಿಯೊಬ್ಬರು ಜಾಗೃತಿ ತೋರಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ರವೀಂದ್ರ ಕನಕೇರಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿಜಾಥಾಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.

ಏಡ್ಸ್ ಮನು ಕುಲಕ್ಕೆ ದೊಡ್ಡ ಕಂಟಕವಾಗಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದ ದೂರವಿರುವುದರ ಜತೆಗೆ ಏಡ್ಸ್ ತಗುಲದಂತೆ ಸೂಕ್ತ ಕ್ರಮಕೈಗೊಳ್ಳಿ. ಏಡ್ಸ್ ರೋಗಿಗಳ ಸಂಪರ್ಕದಿಂದ ದೂರವಿರಬೇಕೆ ಹೊರೆತು ಅವರ ಸ್ನೇಹಪರತೆಯಿಂದಲ್ಲ. ಎಚ್‌ಐವಿ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.

ಪುರಸಭೆ ಸದಸ್ಯೆ ಗುಡದಮ್ಮ ಶ್ರೀನಿವಾಸ, ಸಿಎಚ್‌ಸಿ ವೈದ್ಯರಾದ ಮಲ್ಲೇಶಪ್ಪ, ಡಾ.ಶ್ರೀನಿವಾಸ, ಡಾ.ಗವಿರಾಜ, ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸವರಾಜ, ಔಷಧಿತಜ್ಞ ಶಿವರುದ್ರಪ್ಪ, ಸಿಬ್ಬಂದಿ ಕರಿಬಸಪ್ಪ, ದೇವಣ್ಣ, ಮಂಜುನಾಥ, ಉಮಾದೇವಿ, ಲಕ್ಷ್ಮೀ ಇತರರಿದ್ದರು.