ಜಿಲ್ಲೆ

ಹೈಟೆಕ್ ತಂತ್ರಜ್ಞಾನ ಬಳಸಿ ಪಾರದರ್ಶಕವಾಗಿ ಕೆಕೆಆರ್ ಟಿಸಿ ಚಾಲಕ ಮತ್ತು ಚಾಲಕ ಕಮ್ ನಿರ್ವಾಹಕರ ನೇಮಕ ಪ್ರಕ್ರಿಯೆ : ದೇಶದಲ್ಲೇ ಮೊದಲ ಪ್ರಯೋಗ

ಬಾಬುರಾವ ಯಡ್ರಾಮಿ

*# ಬಾಬುರಾವ ಯಡ್ರಾಮಿ ಕಲಬುರಗಿ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯಲ್ಲಿ ಚಾಲಕರ ಮತ್ತು ಚಾಲಕ ಕಮ್ ನಿರ್ವಾಹಕರ ನೇಮಕಾತಿಯಲ್ಲಿ ದೇಶದಲ್ಲಿಯೇ ಪ್ರಥಮ ಎನ್ನುವಂತೆ ಪೂರ್ಣ ಪ್ರಮಾಣದ ಹೈಟೆಕ್ ತಂತ್ರಜ್ಞಾನಗಳನ್ನು ಬಳಸಿಕೊಂಡು  ಚಾಲನಾ ಪಥದಲ್ಲಿ ಅಳವಡಿಸಿರುವ ಸೆನ್ಸಾರ್ ಮೂಲಕವೇ ಅಂಕ ನೀಡುವಂತ ಟೆಸ್ಟ್ ಟ್ರಾಕ್ ನಿರ್ಮಿಸಿ ಪಾರದರ್ಶಕ ವ್ಯವಸ್ಥೆ ಅಳವಡಿಸಿದೆ.ಇದರಿಂದಾಗಿ ಯಾರ ಶಿಫಾರಸ್ಸು ಒತ್ತಡ ಇಲ್ಲದೆ ಅರ್ಹತೆ ಹೊಂದಿದವರು ಸಂಸ್ಥೆಗೆ ನೇಮಕಗೊಳ್ಳಲು ಸಹಕಾರಿಯಾಗಲಿದೆ.
ಇದರಿಂದಾಗಿ ಆಯ್ಕೆ ಪ್ರಕ್ರಿಯೇ ಪಾರದರ್ಶಕವಾಗಿರಲಿದೆ. ಜತೆಗೆ ಟೆಸ್ಟ್ ಕೊಟ್ಟ ಅಭ್ಯರ್ಥಿಗೆ ಪ್ರತಿಯೊಂದು ಹಂತದಲ್ಲಿ ಅವರು ಪಡೆದಿರುವ ಅಂಕಗಳು  ಎಷ್ಟು ಎಂಬುದು ಆ ಕ್ಷಣದಲ್ಲಿಯೇ ಗೊತ್ತಾಗಲಿರುವುದು ಇದರ ವಿಶೇಷ. ಈ ಮುಂಚೆ ಹೀಗೆ ಇರಲಿಲ್ಲ. ಮ್ಯಾನುವಲ್ ಆಗಿತ್ತು. ಇಂತಹ ವ್ಯವಸ್ಥೆ ಬಳಸಿಕೊಂಡು ಚಾಲಕರ ನೇಮಕ ಮಾಡುವ  ದೇಶದ ಪ್ರಥಮ ಸಂಸ್ಥೆ ಎಂಬ ಗರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಡಿಗೇರಿಸಿಕೊಂಡಿದೆ.

ಈಗ ನಡೆಯುತ್ತಿರುವ ನೇಮಕ ಪ್ರಕ್ರಿಯೆಯಲ್ಲಿ ಡ್ರೈವಿಂಗ್ ಟೆಸ್ಟ್ ಗೆ (ಚಾಲನಾ ಪರೀಕ್ಷೆ)ಗೆ ಸುಮಾರು 17 ಸಾವಿರ ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಅವರಿಗೆ ಬೀದರ್ ಜಿಲ್ಲೆಯ ಹುಮನಾಬಾದನಲ್ಲಿರುವ  ಕೆಕೆಆರ್‌ಟಿಸಿಯ ಪ್ರಾದೇಶಿಕ ವಾಹನ ಚಾಲಕರ ತರಬೇತಿ ಸಂಸ್ಥೆಯಲ್ಲಿರುವ ಆತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಚಾಲನಾ ಪಥದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.  ಚಾಲನಾ ಪಥದಲ್ಲಿ ೧.೧೫ ಕೋ.ರೂ. ವೆಚ್ಚ ಮಾಡಿ ವೈರ್‌ಲೆಸ್ ಸಿಸ್ಟಮ್ ಮತ್ತು ಸೆನ್ಸಾರ್  ತಂತ್ರಜ್ಞಾನ ಅಳವಡಿಸಲಾಗಿದೆ. ಬೆಂಗಳೂರಿನ ಸೆರಾಬರಾ ಕಂಪನಿ ಈ ತಂತ್ರಜ್ಞಾನ ಅಳವಡಿಸಿದೆ ಎಂದು ಸಂಸ್ಥೆಯ ಎಂಡಿ ರಾಚಪ್ಪ ಮಾಹಿತಿ ನೀಡಿದರು.
ಅಭ್ಯರ್ಥಿಗಳಿಗೆ ಅಂಕ ನೀಡುವಲ್ಲಿ ಯಾವುದೇ ಅನ್ಯಾಯವಾಗಬಾರದು. ಅವರು ಎಷ್ಟು ಅಂಕ ಪಡೆದುಕೊಂಡಿದ್ದಾರೆ ಎಂಬುದನ್ನು ಹುಮನಾಬಾದನಲ್ಲಿರುವ ಡ್ರೆÊವಿಂಗ್ ಟೆಸ್ಟ್ ಸೆಂಟರ್‌ದಲ್ಲಿ  ಅಳವಡಿಸಿರುವ ಲೂಪ್‌ವೈರ್ ಮತ್ತು ಸೆನ್ಸಾರ್ ಮೊದಲಾದವ ಹೈಟೆಕ್ ತಂತ್ರಜ್ಞಾನ ಬಳಸಿಕೊಂಡು ಗಣಕಿಕೃತಗೊಂಡಿದೆ. ಹೀಗಾಗಿ  ಹೀಗಾಗಿ ಎಲ್ಲಿಯೂ ಲೋಪ ಆಗುವುದಿಲ್ಲ. ಅಲ್ಲದೆ ದೂರದ ನಿಯಂತ್ರಣ ಕೊಠಡಿಯಲ್ಲಿ ಕುಳಿತುಕೊಂಡು ಸಿಬ್ಬಂದಿ ನಿಗಾ ಇಟ್ಟಿರುತ್ತಾರೆ. ಸೆನ್ಸಾರ್‌ನಿಂದ ಪರೀಕ್ಷಾ  ಸ್ಥಳದಲ್ಲಿರುವ ಡಿಸ್‌ಪ್ಲೆÊ ಬೋರ್ಡನಲ್ಲಿ ಕಂಡು ಬರುವ ಅಂಕ ಹಾಗೂ ಸೆನ್ಸಾರ್ ಮೂಲಕ ನಿಯಂತ್ರಣ ಕೊಠಡಿಗೆ ದೃಶ್ಯ ರವಾನೆಯಾಗಿರುವ ಕಂಪ್ಯೂಟರ್‌ದಲ್ಲಿ ವೀಕ್ಷಣೆ ಮಾಡಿ ಮ್ಯಾನುವಲ್ ಆಗಿ ನೀಡುವ  ಅಂಕ ತಾಳೆಯಾಗುವುದು ಇನ್ನೊಂದು ವಿಶೇಷ.
ಕೆಕೆಆರ್‌ಟಿಸಿಯಲ್ಲಿ ಖಾಲಿ ಇರುವ  ೧೬೯೧ ಚಾಲಕರ ಮತ್ತು ಚಾಲಕ ಕಮ್ ನಿರ್ವಾಹಕರ ಹುದ್ದೆಗಳ ನೇಮಕ ಪ್ರಕ್ರಿಯೆ  ಈಗಾಗಲೇ  ಶುರುವಾಗಿದೆ. ಅದರಲ್ಲ ೯೨೦ ಚಾಲಕರು ಮತ್ತು ೬೯೪ ಹುದ್ದೆಗಳು ಚಾಲಕ ಕಮ್ ನಿರ್ವಾಹಕರ ಹುದ್ದೆಗಳಿಗೆ. ಇದರಲ್ಲಿ ೧೫೦ ಬ್ಯಾಕ್‌ಲಾಗ್ ಸಹ ಸೇರಿವೆ. ಚಾಲಕರ ಹುದ್ದೆಗಳ ನೇಮಕಕ್ಕಾಗಿ ಚಾಲನಾ ಪರೀಕ್ಷೆ ನಡೆಸಿ ಅಂಕ ನೀಡಲು ಕೆಲ ಅಧಿಕಾರಿಗಳು ಹಿಂದೇಟು ಹಾಕಿದರು. ಯಾಕೆ ಎಂದು ಪ್ರಶ್ನಿಸಿದಾಗ ಈಚೆಗೆ ಜರುಗಿದ ಪಿಎಸ್‌ಐ ನೇಮಕ ಅಕ್ರಮ ನಡೆದಿದ್ದರಿಂದ ಅಂತಹ ಕೆಟ್ಟ ಹೆಸರು ನಮಗೆ ಬರುವುದು ಬೇಡ ಎಂದು ಅವಲೊತ್ತಿಕೊಂಡರು. ಇದರಿಂದಾಗಿ ವ್ಯವಸ್ಥಾಕ ನಿರ್ದೇಶಕ ಎಂ.ರಾಚಪ್ಪ , ಚೀಫ್ ಪರ್ಸನ್ ಮ್ಯಾನೇಜರ್ ಅಶ್ರಫ್ ಕೆ.ಎಂ.,ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ವಿ.ಎಚ್ ಇನ್ನಿತರ ಕೆಲವು ಹಿರಿಯ ಅಧಿಕಾರಗಳು ಸೇರಿ ಚರ್ಚೆ ನಡೆಸಿ ಕೊನೆಗೆ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿ ಈ ತೆರನಾಗಿ ಚಾಲಕರ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲು ಮುಂದಡಿ ಇಟ್ಟಿದ್ದಾರೆ. ಯಾವುದೇ ಲೋಪಗಳಲ್ಲಿದ ಈ ಪ್ರಕ್ರಿಯೆ ಬಗ್ಗೆ  ಅಭ್ಯರ್ಥಿಗಳು ಖುಷ್ ಆಗಿದ್ದಾರೆ.

ಹೀಗೆ ನಡೆಯಲಿದೆ ಅಭ್ಯರ್ಥಿಗಳ ಪರೀಕ್ಷೆ
ಚಾಲಕರ ನೇಮಕಕ್ಕಾಗಿ ಚಾಲನಾ ಪರೀಕ್ಷೆಯನ್ನು ಒಟ್ಟು ಹತ್ತು ಸುತ್ತುಗಳಲ್ಲಿ ನಡೆಸಲಾಗುತ್ತದೆ. ಅದಕ್ಕಾಗಿ ೫೦ ಅಂಕಗಳನ್ನು ನಿಗದಿಪಡಿಸಲಾಗಿದೆ. ಟ್ರಾÈಕ್‌ನಲ್ಲಿ  ಅಳಡಿಸಿರುವ ಪೋಲ್‌ಗಳಿಗೆ ಟಚ್ ಮಾಡದೆ ಬಸ್ಸನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಹೋಗಿ ಪಾರ್ಕಿಂಗ್ ಮಾಡುವುದು. ಇಂಗ್ಲೀಷಿನ ಎಸ್ ಪಥದಲ್ಲಿ ಪೋಲ್‌ಗಳನ್ನು ಬಿಳಿಸದಂತೆ ಹಿಮ್ಮುಖವಾಗಿ ಚಲಾಯಿಸುವುದು, ಏರುದಿನ್ನೆಯಲ್ಲಿ ಬಸ್ ತಂದು ನಿಲ್ಲಿಸಿ ಬಂದ್ ಮಾಡಿ, ಮರಳಿ ಚಾಲೂ ಮಾಡಿಕೊಂಡು ಬಸ್ ಹಿಂದೆ ಹೋಗದಂತೆ ನಿರ್ವಹಿಸಿಕೊಂಡು ಮುಂದೆ ಸಾಗಬೇಕು. ಬಳಿಕ ಯಂತ್ರದಲ್ಲಿ ಕೇಳುವ ಪ್ರಶ್ನೆಗಳಿಗೆ ಕ್ಲಿಕ್ ಮಾಡಿ ಉತ್ತರಿಸುವುದು. ಕೊನೆಗೆ  ೮ ಮಾದರಿಯ ಪಥದಲ್ಲಿ ಪೋಲ್‌ಗಳನ್ನು ಬೀಳಿಸದೆ ಚಾಲನೆ ಮಾಡಿಕೊಂಡು ಹೋಗುವುದು. ಈ ಐದು ಪರೀಕ್ಷೆಗಳನ್ನು  ಒಬ್ಬ ಅಭ್ಯರ್ಥಿ ಎರಡು ಸಲ ಮಾಡಬೇಕು. ಅವರ ಚಾಲನಾ ಕೌಶಲ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅಂಕಗಳನ್ನು  ಪಡೆಯಲಿದ್ದಾರೆ.

ಸ್ಥಳದಲ್ಲೇ ಅಂಕ ಜತೆಗೆ ಅರ್ಹತಾ ಪಟ್ಟಿ ವಿತರಣೆ
 ಚಾಲನಾ ಪಥದಲ್ಲಿ ಅಳಡಿಸಿರುವ ಡಿಸ್‌ಪ್ಲೆÊ ಬೋರ್ಡ್ನಲ್ಲಿ ಅಭ್ಯರ್ಥಿ ತನ್ನ ನಿಗದಿತ ಸ್ಥಳ ತಲುಪುತ್ತಲೇ ಅಂಕ ತೋರಿಸುತ್ತದೆ. ಎಷ್ಟು ಪೋಲ್ ಬಿದ್ದಿವೆ ಎಂಬಿತ್ಯಾದಿ ಎಲ್ಲ ಮಾಹಿತಿ ಇರಲಿದೆ. ಅದನ್ನು ಸ್ಥಳದಲ್ಲಿಯೇ ಇರುವ ಎಲ್ಲ ಅಭ್ಯರ್ಥಿಗಳು ವೀಕ್ಷಣೆ ಮಾಡುವರು. ಪ್ರತಿಯೊಂದು ಹಂತದ ಪರೀಕ್ಷೆಯಲ್ಲಿ   ಅಭ್ಯರ್ಥಿ ಪಡೆದ ಅಂಕ ಎಷ್ಟು ಎಂಬುದು ಅವರಿಗೆ ಅಲ್ಲಿನ ಸಿಬ್ಬಂದಿ ತಿಳಿಸಿಯೇ ಮುಂದಿನ ಪರೀಕ್ಷೆ ಕಳುಹಿಸಿಕೊಡುತ್ತಾರೆ. ಎಲ್ಲ ಪರೀಕ್ಷೆ ಮುಗಿಯುತ್ತಲೇ ಅಭ್ಯರ್ಥಿಗೆ ಅವರು ಯಾವ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದುಕೊಂಡಿದ್ಧಾರೆ ಎಂಬ ವಿವರ ಜತೆಗೆ ಅರ್ಹತಾ ಪಟ್ಟಿಯ ಪ್ರತಿಯನ್ನು  ಅಲ್ಲಿನ ಉಸ್ತುವಾರಿ ಅಧಿಕಾರಿಗಳ ಮೊಹರು ಹಾಕಿ ಸಹಿ ಮಾಡಿ ನೀಡಲಾಗುತ್ತದೆ. ಈ ವ್ಯವಸ್ಥೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ನಕಲಿ ಅಭ್ಯರ್ಥಿ ಬಾರದಂತೆ ತಡೆಗೆ
ಆರ್‌ಎಫ್‌ಐಡಿ ಸಿಸಿ ಕ್ಯಾಮರಾ ನಿಗಾ

ಡ್ರೆÊವಿಂಗ್ ಟ್ರಾÈಕ್ ಟೆಸ್ಟ್ಗೆ ನಕಲಿ ಅಭ್ಯರ್ಥಿ ಇಲ್ಲವೇ ಒಬ್ಬರ ಹೆಸರಿನಲ್ಲಿ ಮತ್ತೊಬ್ಬರು ಬರುವಂತೆಯೇ ಇಲ್ಲ. ಅಂತಹ ವ್ಯವಸ್ಥೆ ಅಳಡಿಸಲಾಗಿದೆ. ಅಲ್ಲದೆ ಇಡಿ ಕೇಂದ್ರದೊಳಗಿನ ಪ್ರತಿಯೊಂದು ಹಂತದ ಪ್ರಕ್ರಿಯೆಯೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಲೇ ಇರುತ್ತದೆಯಂತೆ. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸಾಗಿ ದಾಖಲೆಗಳ ಪರಿಶೀಲನೆ ಪೂರ್ಣಗೊಂಡು ಡ್ರೆÊವಿಂಗ್ ಟೆಸ್ಟ್ಗೆ ಅರ್ಹತೆ ಪಡೆದುಕೊಂಡ ಅಭ್ಯರ್ಥಿಗಳಿಗೆ ಹುಮನಾಬಾದನ ಚಾಲನಾ ತರಬೇತಿ ಕೇಂದ್ರಕ್ಕೆ ಬಂದಾಗ ಅವರ ಆಧಾರ ಮೂಲ ಪ್ರತಿ ನೋಡಿಕೊಂಡು ಸ್ಕಿöçನಿಂಗ್‌ಗೆ ಕೂರಿಸಿ ಅವರ ಪೋಟೋವನ್ನು ಸೆರೆ ಹಿಡಿಯಲಾಗುತ್ತದೆ. ಆ ಪೋಟೋ ಮತ್ತು ಈ ಹಿಂದೆ ದಾಖಲಾತಿ ವೇಳೆಗೆ ತೆಗೆದ ಪೋಟೋ ಹಾಗೂ ಬೆರಳ ಗುರುತು ಹೊಂದಾಣಿಕೆಯಾದರೆ ಮಾತ್ರ ಅವರಿಗೆ ರೆಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ನೀಡಲಾಗುತ್ತದೆ. ಅದನ್ನು  ಪ್ರತಿಯೊಂದು  ಚಾಲನೆ ಪರೀಕ್ಷೆ  ನೀಡುವ ಪ್ರತಿ ಬಸ್ಸಿನಲ್ಲಿ  ಅಳವಡಿಸಿರುವ ಯಂತ್ರದ ಮುಂದೆ ತೋರಿಸಬೇಕು. ಆಗ ಅದು ಮುಂದಿನ ಪ್ರಕ್ರಿಯೆಗೆ ತೆರೆದುಕೊಳ್ಳುತ್ತದೆ. ಅಲ್ಲದೆ ಬಸ್‌ಗಳಲ್ಲಿ ಸಹ ಸಿಸಿ ಕ್ಯಾಮರಾ ಅಳವಡಿಸಿ ನಿಗಾ  ಇರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಇಡಿ ಪ್ರಕ್ರಿಯೆಯೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುತ್ತವೆ ಎಂದು ಚೀಫ್ ಪರ್ಸನ್ ಮ್ಯಾನೇಜರ್ ಅಶ್ರಫ್ ಕೆ.ಎಂ.,ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ವಿ.ಎಚ್ ಮಾಹಿತಿ ನೀಡಿದರು.
== ಕೋಟ್==
ಚಾಲಕರ ನೇಮಕ ಪ್ರಕ್ರಿಯೆ ಹಾಗೂ ಚಾಲನಾ ಪರೀಕ್ಷೆ ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ.ದೇಶದಲ್ಲಿಯೇ ಮೊದಲು ಎನ್ನುವಂತೆ ಹೈಟೆಕ್ ಆಗಿ ಸೆನ್ಸಾರ್, ಲೂಪ್‌ವೈರ್ ತಂತ್ರಜ್ಞಾನ ಬಳಸಿಕೊಂಡು ಡ್ರೈ ವಿಂಗ್ ಟ್ರಾಕ ಸಜ್ಜುಗೊಳಿಸಲಾಗಿದೆ. ಇದರಿಂದಾಗಿ ಒಂದೊAದು ಪರೀಕ್ಷೆ ಮುಗಿಯುತ್ತಲೇ ಅಭ್ಯರ್ಥಿ ಪಡೆದ ಅಂಕ ಎಷ್ಟು ಎಂಬುದು ಅವರಿಗೆ ಗೊತ್ತಾಲಿದೆ. ಹೀಗಾಗಿ ಅವರು ಯಾವುದೇ ಶಿಫಾರಸ್ಸು, ಪ್ರಭಾವ ಇಲ್ಲದೆ ಅರ್ಹತೆ ಪಡೆದವರು ಆಯ್ಕೆಯಾಗಲಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲ, ಯಾವುದೇ ವ್ಯವಹಾರಕ್ಕೂ ಅವಕಾಶ ಇಲ್ಲದೆ ಮಾದರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಡ್ರೈ ವಿಂಗ್ ಟೆಸ್ಟ್ ಸೆಪ್ಟಂಬರ್ ಅಂತ್ಯದವರೆಗೆ ನಡೆಯಲಿದೆ.
| ಎಂ.ರಾಚಪ್ಪ
ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ