ಜಿಲ್ಲೆ

ಸೋಡಾ ಬಾಟಲಿಯಿಂದ ತಲೆಗೆ ಏಟು

ಮರಿದೇವ ಹೂಗಾರ

ಹುಬ್ಬಳ್ಳಿ: ನಿನಗೊಂದು ಗತಿ ಕಾಣಿಸುತ್ತೇವೆ ಎಂದು ಹೆದರಿಸಿ ಸೋಡಾ ಬಾಟಲಿಯಿಂದ ಒಬ್ಬನ ತಲೆಗೆ ಹೊಡೆದ ಆರೋಪದಡಿ ಐವರ ವಿರುದ್ಧ ಇಲ್ಲಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಮ್ರಾನ್‌ಗೆ ಹೊಡೆದಿರುವ ನಗರದ ಬಿಲಾಲಖಾನ್, ಸಾಧಿಕ್, ಸದ್ಧಾಂ, ಇಮ್ತಿಯಾಜ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಮ್ ನಡೆಸುತ್ತಿದ್ದ ಬಿಲಾಲಖಾನ್, ಜಿಮ್‌ಗೆ ಬರುವ ಹುಡುಗರನ್ನು ಮಾತನಾಡಿಸಬೇಡ ಎಂದು ಇಮ್ರಾನ್ ಜತೆಗೆ ತನ್ನ ಗೆಳೆಯರೊಂದಿಗೆ ಸೇರಿ ಜಗಳ ಮಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಉಣಕಲ್ ಹತ್ತಿರ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ಇಮ್ರಾನ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.