ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಚನ್ನಾದೇವಿ ಅಗ್ರಹಾರದ ಕೋಡಿಪಾಳ್ಯ ರಸ್ತೆಯಲ್ಲಿ 2023ರ ಡಿ.27ರಂದು ದ್ವಿಚಕ್ರವಾಹನಕ್ಕೆ ಕಾರು ಗುದ್ದಿ ಪತ್ರಿಕಾ ವಿತರಕ ಚೇತನ್‌ಕುಮಾರ್ ಅವರ ಕಾಲುಮೂಳೆ ಮುರಿದ ಪ್ರಕರಣ ಕಗ್ಗಂಟಾಗಿದ್ದು, ಹಿಟ್ ಆ್ಯಂಡ್ ರನ್ ಕಾರು ಚಾಲಕ ಪತ್ತೆಯಾಗಿಲ್ಲ.
ತೀವ್ರ ಗಾಯಗೊಂಡಿರುವ ಚೆನ್ನಾದೇವಿ ಅಗ್ರಹಾರದ ಚೇತನ್‌ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟವಾಗಿದೆ. ಶೀಘ್ರ ಚಾಲಕನ ಪತ್ತೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕಾರು ಸಂಖ್ಯೆ ಪತ್ತೆಯಾಗಿಲ್ಲ: ದ್ವಿಚಕ್ರವಾಹನಕ್ಕೆ ಹಿಂದಿನಿಂದ ಗುದ್ದಿ ಪರಾರಿಯಾಗಿರುವ ಕಾರಿನ ಚಲನವಲನ ಪರಿಶೀಲನೆಗೆ ದೊಡ್ಡಬೆಳವಂಗಲ ಠಾಣೆ ಪೊಲೀಸರು ವಿವಿಧ ಕಡೆ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದ್ದಾರೆ. ಬಿಳಿ ಬಣ್ಣದ ಓಮ್ನಿ ಕಾರು ಎಂಬುದು ಖಚಿತವಾಗಿದೆ. ಆದರೆ ಕಾರಿನ ನೋಂದಣಿ ಸಂಖ್ಯೆ ಅಸ್ಪಷ್ಟವಾಗಿದ್ದು ತನಿಖೆಗೆ ಅಡ್ಡಿಯಾಗಿದೆ, ಆದರೂ ತನಿಖೆ ಮುಂದುವರಿದಿದ್ದು ಶೀಘ್ರವೇ ಅಪಘಾತ ಎಸಗಿದ ವ್ಯಕ್ತಿಯನ್ನು ಪತ್ತೆಹಚ್ಚಲಾಗುವುದು ಎಂದು ದೊಡ್ಡಬೆಳವಂಗಲ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ತಿಳಿಸಿದ್ದಾರೆ.
ಏನಿದು ಪ್ರಕರಣ? ಡಿ.27ರಂದು ಮಧ್ಯಾಹ್ನ 1 ಗಂಟೆ ವೇಳೆ ಚೇತನ್‌ಕುಮಾರ್ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಚನ್ನಾದೇವಿ ಅಗ್ರಹಾರ ಕೋಡಿಪಾಳ್ಯ ರಸ್ತೆಯಲ್ಲಿ ಹೋಗುವಾಗ ವೇಗವಾಗಿ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದ ದೃಶ್ಯ ಗಮನಿಸಿದ ಸಾರ್ವಜನಿಕರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದರು. ಅಪಘಾತದ ವೇಳೆ ಕಾರು ನಿಲ್ಲಿಸುವಂತೆ ನಾಟಕ ಮಾಡಿದ್ದ ಚಾಲಕ ತಕ್ಷಣ ಅಲ್ಲಿಂದ ಪರಾರಿಯಾಗಿದ್ದ. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಚೇತನ್