ಕಡೂರು ತಾಲೂಕು ಆಡಳಿತದಿಂದ ನಡೆದ ಸ್ವಾತಂತ್ರೃ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಸಿ.ಎಸ್.ಪೂರ್ಣಿಮಾ, ಸಿ.ಆರ್.ಪ್ರವೀಣ್, ಭಂಡಾರಿ ಶ್ರೀನಿವಾಸ್ ಇತರರಿದ್ದರು. 
ಜಿಲ್ಲೆ

ಮಹಾತ್ಮ ಗಾಂಧಿ ಭೇಟಿ ಇತಿಹಾಸ

ಡೂರು: ಸ್ವಾತಂತ್ರೃಹೋರಾಟದ ಸಂದರ್ಭದಲ್ಲಿ ಪಟ್ಟಣಕ್ಕೆ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಭೇಟಿ ನೀಡಿದ್ದು ಇತಿಹಾಸವಾಗಿದೆ. ನಿಡಘಟ್ಟ ಗ್ರಾಮದಲ್ಲಿ ಗಾಂಧಿ ಸ್ಮರಣಾರ್ಥ ದೇವಸ್ಥಾನ ನಿರ್ಮಿಸಿರುವುದು ದೇಶಾಭಿಮಾನ ತೋರಿಸುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ದೇಶವನ್ನು ಮತ್ತಷ್ಟು ಸದೃಢಗೊಳಿಸಲು ನಾವೆಲ್ಲರೂ ಕಟ್ಟಿಬದ್ಧರಾಗಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಯೋಧರು ದೇಶಕ್ಕಾಗಿ ದುಡಿಯುತ್ತಿದ್ದಾರೆ. ಸಂವಿಧಾನದ ಆಶಯದಡಿ ನಾವೆಲ್ಲ ಬದುಕು ಸಾಗಿಸಬೇಕು ಎಂದರು.
ವಿವಿಧ ಶಾಲೆಗಳ ಮಕ್ಕಳು ಪಥಸಂಚಲನ ನಡೆಸಿದರು. ಹಿರಿಯ ಪತ್ರಕರ್ತ ಕೆ.ಎನ್.ಕೃಷ್ಣಮೂರ್ತಿ, ಡಾ. ಉಮೇಶ್‌ರಾವ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್.ಪ್ರವೀಣ್, ಪುರಸಭೆ ಸದಸ್ಯರಾದ ಈರಳ್ಳಿ ರಮೇಶ್, ಹಾಲಮ್ಮ ಸಿದ್ರಾಮಪ್ಪ, ಜ್ಯೋತಿ ಆನಂದ್, ಗುಮ್ಮನಹಳ್ಳಿ ಅಶೋಕ್, ಹರೀಶ್ ಅಗ್ನಿ, ಎನ್.ಬಷೀರ್ ಸಾಬ್, ಕೆ.ಎಸ್.ಮಂಜುನಾಥ್, ಸಿಪಿಐ ದುರ್ಗಪ್ಪ, ಕಲ್ಲಪ್ಪ, ವಿಜಯ್‌ಕುಮಾರ್, ಕಸಬಾ ಕಂದಾಯ ನಿರೀಕ್ಷಕ ರವಿಕುಮಾರ್, ಅಧಿಕಾರಿಗಳು ಇದ್ದರು.