ಬೈಂದೂರು: ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆ ಹಾಗೂ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಇತಿಹಾಸ ದರ್ಪಣ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸ್ವತಂತ್ರ ಸಂಶೋಧಕ ಅಜಯ್ ಕುಮಾರ್ ಶರ್ಮಾ ಅವರು ಭಾರತದ ಲೋಹದ ಕೊಳವೆಯ ರಾಕೆಟ್‌ನ ಇತಿಹಾಸ ಆಕಾಶಬಾಣದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಬಾಡ ದಿ.ಮಂಜುನಾಥ ಜೋಷಿ ಮೊಮ್ಮಗಳು ಜಯದೇವಿ ಭಟ್ ಉದ್ಘಾಟಿಸಿದರು. ಪ್ರಮುಖರಾದ ಚಿತ್ರಾ ಪಡಿಯಾರ್, ಮಮತಾ, ಪ್ರದೀಪ ಕುಮಾರ್ ಬಸ್ರೂರು, ಕವಿತಾ ಆಚಾರ್ಯ ಮುದೂರು ವಿಚಾರ ಹಂಚಿಕೊಂಡರು. ವಿದ್ಯಾರ್ಥಿನಿ ಮೇಘ ಪ್ರಾರ್ಥಿಸಿದರು. ಉಪನ್ಯಾಸಕ ನವೀನ್ ಎಚ್.ಜೆ. ವಂದಿಸಿದರು. ಹರ್ಷಿತಾ ನಿರೂಪಿಸಿದರು.