ನಿಪ್ಪಾಣಿ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಇತಿಹಾಸ ವಿಭಾಗದಿಂದ ಪ್ರಾಚೀನ ವಸ್ತು, ಕುಬ್ಜ ಗಿಡ ಹಾಗೂ ವಿವಿಧ ಚಿತ್ರಕಲೆ ಪ್ರದರ್ಶನ ಜರುಗಿತು.
ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಪ್ರವೀಣ ಬಾಗೇವಾಡಿ ಉದ್ಘಾಟಿಸಿದರು. ಪ್ರದರ್ಶನದಲ್ಲಿ ಮಹಾಲಿಂಗ ಬೀಳಗಿ ಸಂಗ್ರಹಿಸಿದ ಪ್ರಾಚೀನ ನಾಣ್ಯ, ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷ್ ಭಾರತದ ನಾಣ್ಯ, ಕ್ಯಾಮರಾ, ತೂಕದ ಕಲ್ಲು, ಕೀಲಿ ಕೈ, ಟೆಲಿಫೋನ್, ಮಿಶ್ರಲೋಹ ಆಯುಧ, ಪೂಜಾ ಸಾಮಗ್ರಿ, ವಿವಿಧ ಕುಬ್ಜ ಗಿಡ, 2019-20ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿನಾಯಕ ಚಿಕ್ಕೋಡಿ ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಪ್ರಾಚಾರ್ಯ ಡಾ.ಎಂ.ಎಂ.ಹುರಳಿ, ಪಪೂ ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಐಕ್ಯೂಎಸಿ ಸಂಯೋಜಕ ಡಾ.ಎ.ಎ.ಕಾಂಬಳೆ, ಇತಿಹಾಸ ವಿಭಾಗದ ಮುಖ್ಯಸ್ಥ ನಾಗರಾಜ ಬೆಳಗಾಂವಕರ, ಪ್ರಾಧ್ಯಾಪಕ ಡಾ.ಎಸ್.ಎಂ.ರಾಯಮಾನೆ, ಶಂಕರಮೂರ್ತಿ ಕೆ.ಎನ್., ಸುಧೀರ ಕೋಠಿವಾಲೆ, ಡಾ.ಬಿ.ಎಂ.ಜನಗೌಡ, ಸಿದ್ದು ಉದಗಟ್ಟಿ, ಶಶಿಧರ ಕುಂಬಾರ, ಡಾ.ಆನಂದ ಕೆಂಚಕ್ಕನವರ, ಮಂಜುಳಾ ಕೆ., ತೇಜಸ್ವಿನಿ ನಂದಿ, ಪೂಜಾ ಖಾನಪ್ಪಗೋಳ ಇತರರಿದ್ದರು.