ಜಿಲ್ಲೆ

ಮಧುಗಿರಿ ಪುರಸಭೆಯಲ್ಲಿ ಇತಿಹಾಸ

ತುಮಕೂರು ಡೆಸ್ಕ್

ಒಕ್ಕಲಿಗ ಸಮುದಾಯದ ಮಂಜುನಾಥ್​ ಅಧ್ಯಕ್ಷರಾಗಿ ಆಯ್ಕೆ | ಸುಜಾತಾ ಉಪಾಧ್ಯಕ್ಷೆ | ನಿರೀಕ್ಷೆಯಂತೆ ಈ ಬಾರಿಯೂ ಅವಿರೋಧ ಆಯ್ಕೆ

ವಿಜಯವಾಣಿ ಸುದ್ದಿಜಾಲ ಮಧುಗಿರಿ
ಪಟ್ಟಣದ ಪುರಸಭೆಗೆ ಶನಿವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಅವಿರೋಧ ಆಯ್ಕೆ ನಡೆದಿದ್ದು, ಲಾಲಾಪೇಟೆ ಮಂಜುನಾಥ್​ ಅಧ್ಯರಾಗಿ ಮತ್ತು ಸುಜಾತಾ ಶಂಕರ್​ ನಾರಾಯಣ್​ ಉಪಾಧ್ಯರಾಗಿ ಆಯ್ಕೆಯಾಗಿದ್ದಾರೆ.


ಕ್ಷೇತ್ರದಲ್ಲಿ ಕುಂಚಿಟಿಗ ಸಮುದಾಯ ಪ್ರಬಲ ಮತ ಬ್ಯಾಂಕ್​ ಹೊಂದಿದ್ದರೂ ಪುರಸಭೆ ಇತಿಹಾಸದಲ್ಲಿ ಈವರೆಗೂ ಕುಂಚಿಟಿಗ ಒಕ್ಕಲಿಗ ಸಮುದಾಯದ ಯಾರೊಬ್ಬರಿಗೂ ಪುರಸಭೆ ಅಧ್ಯ ಸ್ಥಾನ ಒಲಿದು ಬಂದಿರಲಿಲ್ಲ. ಇದೇ ಮೊದಲನೇ ಬಾರಿಗೆ ಈ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಒಲಿದಿದೆ. ಲಾಲಾಪೇಟೆ ಮಂಜುನಾಥ್​ ಸಮುದಾಯದ ಪ್ರಥಮ ಅಧ್ಯರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.


2018ರಲ್ಲಿ ಜೆಡಿಎಸ್​ನಲ್ಲಿ ಹಾಲಿ ಶಾಸಕರಿದ್ದರೂ ಪುರಸಭೆ ಚುನಾವಣೆಯಲ್ಲಿ ಜಯಗಳಿಸಿದ ಮೂರೇ ತಿಂಗಳಿಗೆ ಕೆ.ಎನ್​.ರಾಜಣ್ಣ ಅವರನ್ನು ನಂಬಿ ಲಾಲಾಪೇಟೆ ಮಂಜುನಾಥ್​ ಕಾಂಗ್ರೆಸ್​ಗೆ ಬಂದಿದ್ದರು. ಅಂತೆಯೇ, ರಾಜಣ್ಣ ಅವರನ್ನು ನಂಬಿಕೊಂಡು ಬಂದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಅಲ್ಲದೇ ರಾಜಣ್ಣ ಒಕ್ಕಲಿಗ ವಿರೋಧಿ ಎಂದು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಅಸವನ್ನಾಗಿ ಬಳಸಿಕೊಳ್ಳುತ್ತಿದ್ದ ವಿರೋಧಿಗಳಿಗೆ ಈಗ ತಕ್ಕ ಉತ್ತರ ನೀಡಿದಂತಾಗಿದೆ.


ಅಚ್ಚರಿಯ ನಡೆ: ಪುರಸಭೆ ಜೆಡಿಎಸ್​ ಸದಸ್ಯರಾದ ತಿಮ್ಮರಾಯಪ್ಪ ಮತ್ತು ಚಂದ್ರಶೇಖರ್​ ಬಾಬು ಶನಿವಾರ ಬೆಳಗ್ಗೆ ಕೆ.ಎನ್​.ರಾಜಣ್ಣ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಣಿಸಿಕೊಂಡು ರಾಜಣ್ಣ ಅವರಿಗೆ ಬೆಂಬಲ ಸೂಚಿಸುವ ಮೂಲಕ ಅವಿರೋಧ ಆಯ್ಕೆಗೆ ಸಹಕರಿಸಿ ಅಚ್ಚರಿ ಮೂಡಿಸಿದರು. ಅಧ್ಯರಿಗೆ ಸೂಚಕರಾಗಿ ಮಂಜುನಾಥ ಆಚಾರ್​, ನಾಗಲಕ್ಷ್ಮೀ, ಉಪಾಧ್ಯರಿಗೆ ರಾಧಿಕಾ ಆನಂದ ಕೃಷ್ಣ, ನಸೀಮ ಬಾನು ಸೂಚಕರಾಗಿದ್ದರು. ಚುನಾವಣಾ ಅಧಿಕಾರಿಗಳಾಗಿ ಗೋಟೂರು ಶಿವಪ್ಪ ಕರ್ತವ್ಯ ನಿರ್ವಹಿಸಿದರು. ಅಧ್ಯರ ಆಯ್ಕೆ ನಂತರ ವಿಧಾನ ಪರಿಷತ್​ ಸದಸ್ಯ ರಾಜೇಂದ್ರ ರಾಜಣ್ಣ ಮಾತನಾಡಿ, ಅಧಿಕಾರವೆಂಬುದು ಹಣೆಬರಹದಲ್ಲಿ ಬರೆದಿದ್ದರೆ ಮನೆಬಾಗಿಲಿಗೆ ಬರುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಇಲ್ಲಿಯವರೆಗೂ ಪುರಸಭೆಗೆ ಕುಂಚಿಟಿಗ ಸಮುದಾಯದವರು ಅಧ್ಯರಾಗಿಲ್ಲ ಎಂಬ ಕೊರಗಿತ್ತು. ಇಂದು ಅದು ಕೊನೆಗೊಂಡಿದೆ ಎಂದರು. ಪಟ್ಟಣದ ಅಭಿವೃದ್ಧಿಗೆ 30 ಕೋಟಿ ರೂ., ನಗರಕ್ಕೆ 500 ಮನೆಗಳು ಮಂಜೂರಾಗಿದ್ದು, ತಾಲೂಕಿಗೆ 4 ಸಾವಿರ ಮನೆಗಳು ಮಂಜೂರಾಗಿವೆ. ಎಂಐ ವತಿಯಿಂದ ದೊಡ್ಡೇರಿ ಹೋಬಳಿಯ ಎಂಟು ಕೆರೆಗಳಿಗೆ ಎತ್ತಿನ ಹೊಳೆ ಯೋಜನೆಯಡಿ ನೀರು ಹರಿಸಲು 116 ಕೋಟಿ ರೂ. ವೆಚ್ಚದಲ್ಲಿ ಟೆಂಡರ್​ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು.


ಡಿಸಿಸಿ ಬ್ಯಾಂಕ್​ ಉಪಾಧ್ಯ ಜಿಜೆ ರಾಜಣ್ಣ, ನಿರ್ದೇಶಕ ಬಿ.ನಾಗೇಶ ಬಾಬು, ತಾಪಂ ಮಾಜಿ ಅಧ್ಯೆ ಇಂದಿರಾ ದೇನಾನಾಯ್ಕ, ಸುವರ್ಣಮ್ಮ, ತುಂಗೋಟಿ ರಾಮಣ್ಣ, ಎಂ.ಕೆ.ನಂಜುಂಡಯ್ಯ, ಎನ್​.ಗಂಗಣ್ಣ, ಕಾರ್ಪೆನಹಳ್ಳಿ ಅಶೋಕ್​, ಕೊಂಡವಾಡಿ ರಾಜಕುಮಾರ್​, ಬ್ಲಾಕ್​ ಕಾಂಗ್ರೆಸ್​ ಅಧ್ಯರಾದ ಆದಿನಾರಾಯಣ ರೆಡ್ಡಿ, ಗೋಪಾಲಯ್ಯ ಮತ್ತು ಪುರಸಭೆ ಸದಸ್ಯರು ಇದ್ದರು.

ನಿಜವಾದ ವಿಜಯವಾಣಿ ವರದಿ: ಕುಂಚಿಟಿಗ ಸಮುದಾಯದ ಲಾಲಾಪೇಟೆ ಮಂಜುನಾಥ್​ ಅವರು ಪುರಸಭೆ ಅಧ್ಯರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಜಯವಾಣಿ ಆ.28ರಂದು "ಒಕ್ಕಲಿಗರಿಗೆ ಒಲಿಯುತ್ತಾ ಮಧುಗಿರಿ ಪಟ್ಟ?' ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇಂದು ಅದು ಸತ್ಯವಾಗಿದೆ.

ಕ್ಷೇತ್ರದಲ್ಲಿ ಇಂದು ಇತಿಹಾಸ ಸೃಷ್ಟಿಯಾಗಿದ್ದು, ಕುಂಚಿಟಿಗ ಸಮುದಾಯದವರಿಗೆ ಪುರಸಭೆ ಅಧ್ಯ ಸ್ಥಾನ ದೊರೆತಿದೆ. ನಾನು ಅಧ್ಯ ಸ್ಥಾನಕ್ಕೆ ಆಯ್ಕೆಯಾಗಲು ಶ್ರಮಿಸಿದ ಸಹಕಾರ ಸಚಿವ ರಾಜಣ್ಣ, ವಿಧಾನ ಪರಿಷತ್​ ಸದಸ್ಯ ರಾಜೇಂದ್ರ ರಾಜಣ್ಣ ಅವರಿಗೆ 23 ನೇ ವಾರ್ಡಿನ ಮತದಾರರಿಗೆ ಮತ್ತು ಪುರಸಭೆ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.| ಲಾಲಾಪೇಟೆ ಮಂಜುನಾಥ್​ ನೂತನ ಅಧ್ಯಕ್ಷ