ಹುಕ್ಕೇರಿ: ನಾಡಿನ ಐತಿಹಾಸಿಕ ಪರಂಪರೆಗೆ ಜಾನಪದ ಕೊಡುಗೆ ಅಪಾರ. ಉತ್ತರ ಕರ್ನಾಟಕದ ಬಯಲಾಟ, ಸೋಬಾನ, ಹಂತಿ ಪದಗಳು ವಿಶಿಷ್ಟತೆ ಪಡೆದಿವೆ ಎಂದು ರಾಣಿ ಚನ್ನಮ್ಮ ವಿವಿಯ ಪ್ರಾಧ್ಯಾಪಕ ಡಾ.ಪಿ.ನಾಗರಾಜ ಹೇಳಿದರು.
ತಾಲೂಕಿನ ಶಿರಗಾಂವ ಗ್ರಾಮದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಶಿವನಂದಾ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಾನಪದ ಕಲಾಮೇಳ ಉದ್ಘಾಟಿಸಿ ಮಾತನಾಡಿದರು.
ಡಾ.ರಾಜಶೇಖರ ಇಚ್ಚಂಗಿ ಮಾತನಾಡಿ, ಜನಪದ ಕಲೆ ಮತ್ತು ಸಾಹಿತ್ಯಕ್ಕೆ ಬೆಳಗಾವಿ ಜಿಲ್ಲೆ ಕೊಡುಗೆ ಬಹಳಷ್ಟಿದೆ. ದೇಶದ ಕಲೆ, ಸಂಸ್ಕೃತಿ ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಹಿರಿಯ ಜನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ, ಡಾ.ಶ್ರೀಶೈಲ ಮಠಪತಿ, ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ ಮಾತನಾಡಿದರು. ಆಶಾ ಯಮಕನಮರಡಿ ಜನಪದ ಸಾಹಿತ್ಯದಲ್ಲಿ ಮಹಿಳಾ ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗೋಪಾಲ ಚಿಪನಿ, ಶಾಂತಲಾ ಉದೋಶಿ, ಶ್ರವಣಕುಮಾರ ಕಾಂಬಳೆ, ರಾಜಶ್ರೀ ಕೆಳಗಡೆ. ಕಲ್ಲಪ್ಪ ಸೊಡ್ಡನ್ನವರ, ಪ್ರಶಾಂತ ಘೋಡಗೇರಿ, ಗಂಗೋತ್ರಿ ಚೌಗಲಾ, ಅಶ್ವಿನಿ ಘೋಡಗೇರಿ, ಪ್ರಕಾಶ ಹೊಸಮನಿ, ಸರೋಜನಿ ಬಡಿಗೇರ, ಈಶ್ವರ ಚೌಗಲಾ, ಸತ್ಯವ್ವ ಮಾದರ, ಪುರುಷೋತ್ತಮ ಚಿತ್ತರಗಿ, ಸ್ಪಂದನಾ ಮಾದರ, ಅಲ್ಲಪ್ಪ ಚೌಗಲಾ, ಶೋಭಾ ಸೊಡ್ಡನ್ನವರ ಇತರರಿದ್ದರು. ಮಹಾಂತೇಶ ಹೊಸಮನಿ ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುರೇಶ ಮಂಜರಗಿ ವಂದಿಸಿದರು.