filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.044938; highlight: 1; algolist: 0; multi-frame: 1; brp_mask: 8; brp_del_th: 0.0507,0.0000; brp_del_sen: 0.1500,0.0000; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38; 
ಜಿಲ್ಲೆ

1198 ದಿನದ ಹೋರಾಟಕ್ಕೆ ಐತಿಹಾಸಿಕ ಗೆಲುವು

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸುತ್ತಿದ್ದಂತೆ ಮಂಗಳವಾರ ದೇವನಹಳ್ಳಿ ಸೇರಿ ಗ್ರಾಮಾಂತರ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರ ಸಂಭ್ರಮ ಮುಗಿಲು ಮುಟ್ಟಿತು.

ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಸಂದ ಐತಿಹಾಸಿಕ ಗೆಲುವು ಎಂದು ರೈತ ಹೋರಾಟಗಾರರು ಬಣ್ಣಿಸಿದ್ದು, ಸಿಎಂ ಸಿದ್ದರಾಮಯ್ಯ ಪರ ೋಷಣೆ ಕೂಗಿದರು. ದೇವನಹಳ್ಳಿ ಪಟ್ಟಣದಲ್ಲಿ ಜಮಾವಣೆಯಾದ ಭೂಸ್ವಾಧೀನ ವಿರೋಧಿ ಸಮಿತಿ ಹೋರಾಟಗಾರರು ಹಾಗೂ ನೂರಾರು ರೈತಪರ ಹೋರಾಟಗಾರರು ಹಾಗೂ ಸಂಘಸಂಸ್ಥೆಗಳ ಮುಖಂಡರು ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು. ತಮಟೆ ಸದ್ದಿಗೆ ನೃತ್ಯದ ಮೂಲಕ ಸಂತಸ ವ್ಯಕ್ತಪಡಿಸಿದ ರೈತರು ನಮ್ಮ ಮಣ್ಣನ್ನು ನಾವು ಬಿಟ್ಟುಕೊಡುವುದಿಲ್ಲ, ಕೃಷಿಯೇ ನಮ್ಮ ಜೀವನಾಡಿ ಎಂದು ಪುನರುಚ್ಛರಿಸಿದರು.

ಹೂಮಾಲೆ ಹಾಕಿ ಸ್ವಾಗತ: ಬೆಂಗಳೂರಿನಿಂದ ಮರಳಿದ ರೈತ ಮುಖಂಡರಿಗೆ ದೇವನಹಳ್ಳಿ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ರೈತರು ಹೂಮಾಲೆ ಹಾಕಿ ಹಸಿರು ಶಾಲು ಹೊದಿಸಿ ಸ್ವಾಗತಿಸಿದರು. ಬಳಿಕ ಪಟಾಕಿ ಸಿಡಿಸಿ, ತಮಟೆ ವಾದ್ಯಕ್ಕೆ ಹೆಜ್ಜೆ ಹಾಕಿ ಅಲ್ಲಿಂದ ಪ್ರವಾಸಿ ಮಂದಿರದವರೆಗೆ ಮೆರವಣಿಗೆ ಮೂಲಕ ಸಾಗಿ ವಿಜಯೋತ್ಸವ ಆಚರಿಸಿದರು. ನಾಡಪ್ರಭು ಕೆಂಪೇಗೌಡ, ಟಿಟ್ಟಪುಸುಲ್ತಾನ್, ಡಾ. ಬಿಆರ್. ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಮ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಸಂಘಟಿತ ಹೋರಾಟಕ್ಕೆ ಲ:ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಇದು ಎಲ್ಲರ ಸಂಘಟಿತ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ, ಒಗ್ಗಟ್ಟಿನ ಹೋರಾಟದಿಂದ ಜಯಸಾಧಿಸಬಹುದು ಎಂಬುದು ಸಾಬೀತಾಗಿದೆ ಎಂದರು.

ರಾಜ್ಯ ರೈತ ಸಂಘದ ಹಸಿರು ಸೇನೆಯ ಅಧ್ಯ್ಯಕ್ಷ ಡಾ. ಬಿ.ಕೆ.ವಿನೋದಕುಮಾರಗೌಡ ಮಾತನಾಡಿ, ಇದು ಮೂರುವರೆ ವರ್ಷಗಳ ಸಂಘಟಿತ ಹೋರಾಟದ ಫಲವಾಗಿದೆ ಮುಖ್ಯಮಂತ್ರಿಗಳು ರೈತರ ಪರವಾದ ನಿರ್ಣಯ ತೆಗೆದುಕೊಳ್ಳದೇ ಹೋಗಿದ್ದರೆ ರಾಜ್ಯ ಸರ್ಕಾರದ ಬುಡವೇ ಅಲುಗಾಡುವ ಸ್ಥಿತಿಗೆ ಹೊಗುತ್ತಿತ್ತು ಆದರೆ ಸಿಎಂ ಗಟ್ಟಿ ತೀರ್ಮಾನ ಪ್ರಕಟಿಸಿದರು. ನಾನು ಹೋರಾಟದಿಂದ ಬಂದವನು ರೈತರ ಪರವಾಗಿದ್ದೇನೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು. ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಇದು 13 ಹಳ್ಳಿಗಳ ರೈತರ ಗೆಲುವು ಮಾತ್ರವಲ್ಲ ನಾಡಿನ ಸಾಹಿತಿಗಳು, ಚಿಂತಕರು, ಜನಪರ, ದಲಿತಪರ, ರೈತಪರ ಸಂಘಟನೆಗಳು, ಕಲಾವಿದರ ಗೆಲುವಾಗಿದೆ ಈ ಗೆಲುವನ್ನು ಇವರೆಲ್ಲರಿಗೂ ಅರ್ಪಿಸುತ್ತವೆ ಎಂದರು.

ಭೂಮಿ ಕೊಡುವವರ ಮನವೊಲಿಕೆ:ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು ಎಂಬ ಸರ್ಕಾರದ ಪ್ರಕಟಣೆ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿರುವ ಹೋರಾಟಗಾರರು ಭೂಮಿ ಕೊಡಲು ಸಮ್ಮತಿ ಇರುವ ರೈತರ ಮನವೊಲಿಕೆ ಪ್ರಯತ್ನ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೆಲವು ಮಧ್ಯವರ್ತಿಗಳು ಹಾಗೂ ರಾಜಕೀಯ ಪ್ರಭಾವಿತರು ರೈತರಿಗೆ ಆಮಿಷ ತೋರಿಸಿ ಭೂಮಿ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ವಾಸ್ತವವಾಗಿ ಭೂಮಿ ಕೊಡಲು ಈ ಭಾಗದ ಯಾವ ರೈತರೂ ಸಿದ್ದರಿಲ್ಲ. ಆದ್ದರಿಂದ ಆಮಿಷಕ್ಕೆ ಒಳಗಾಗಿರುವ ರೈತರ ಮನವೊಲಿಸಿ ಈ ಭಾಗದಲ್ಲಿ ತುಂಡು ಭೂಮಿಯೂ ಸ್ವಾಧೀನವಾಗದಂತೆ ನೋಡಿಕೊಳ್ಳುವ ಮಹತ್ತರ ಹೊಣೆಗಾರಿಕೆ ಇದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಕೆಲವು ರಿಯಲ್ ಎಸ್ಟೇಟ್‌ನವರು ರೈತರಿಂದ ಭೂಮಿಗಳನ್ನು ಅಗ್ರಿಮೆಂಟ್ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅಂಥವರನ್ನು ಪತ್ತೆ ಮಾಡಿ ಅವರ ಕಪಿಮುಷ್ಟಿಯಿಂದ ರೈತರನ್ನು ಬಿಡುಗಡೆ ಮಾಡುವ ಪ್ರಯತ್ನ ಮಾಡಲಾಗುವುದು. ಈ ಹೋರಾಟಕ್ಕೆ ಐತಿಹಾಸಿಕ ಗೆಲುವು ಸಿಕ್ಕಿದೆ ಹಾಗಂತ ಮೈಮರೆತು ಕೂರುವುದಿಲ್ಲ ಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತ ಮುಖಂಡರು ೋಷಿಸಿದರು.

13 ಹಳ್ಳಿಗಳ 1198 ದಿನಗಳ ಹೋರಾಟ: ದೇವನಹಳ್ಳಿ ತಾಲೂಕಿನ 1777 ಎಕರೆಯಷ್ಟು ಜಮೀನು ಸ್ವಾಧೀನಪಡಿಸಿಕೊಂಡು ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಈ ಭಾಗದ ಲವತ್ತಾದ ಕೃಷಿ ಭೂಮಿ ನೀಡಲು ನಿರಾಕರಿಸಿದ ಸುಮಾರು 13 ಹಳ್ಳಿಗಳ ರೈತರ ಸರ್ಕಾರದ ಯೋಜನೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಸಣ್ಣದಾಗಿ ಆರಂಭವಾದ ಭೂಸ್ವಾಧೀನ ವಿರೋಧಿ ಹೋರಾಟ ದಿನಗಳದಂತೆ ದೊಡ್ಡಮಟ್ಟಕ್ಕೆ ಕಿಚ್ಚು ಹೊತ್ತಿಸಿತು. ಹಲವು ಪ್ರತಿಭಟನೆ, ಧರಣಿಗಳು ನಡೆದವು, ಮತದಾನ ಬಹಿಷ್ಕಾರ, ದೇವನಹಳ್ಳಿ ಬಂದ್, ದೇವನಹಳ್ಳಿ ಚಲೋದಂಥ ಪ್ರತಿಭಟನೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಆಗೆಲ್ಲ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿ ಹಲವರು ರಾಜಿ ಸಂಧಾನದ ಮೂಲಕ ಪ್ರತಿಭಟನೆ ಶಮನಗೊಳಿಸುವ ಪ್ರಯತ್ನ ಮಾಡಿದ್ದರು. ಹಲವು ಸಂಧಾನ ಸಭೆಗಳು ವಿಲವಾಗಿದ್ದವು. ಹೋರಾಟ ಮುಂದುವರೆದಿತ್ತು. ಅಂತಿಮವಾಗಿ ಜು.15ರಂದು ಸರ್ಕಾರ ರೈತ ಪರ ನಿರ್ಧಾರ ಪ್ರಕಟಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ. ಇದು ದೇವನಹಳ್ಳಿ ರೈತರ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ಐತಿಹಾಸಿಕ ದಿನವಾಗಿದೆ ಎಂಬ ಬಣ್ಣನೆ ವ್ಯಕ್ತವಾಗಿದೆ.