ಜಿಲ್ಲೆ

ಐತಿಹಾಸಿಕ ಕಲ್ಲಗುಡಿ ರಾಮಲಿಂಗೇಶ್ವರ ಅದ್ದೂರಿ ರಥೋತ್ಸವ

ಬೈಲಹೊಂಗಲ: ಪ್ರಾಚೀನ ಇತಿಹಾಸ ಹೊಂದಿರುವ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವ ಭಕ್ತರ ಹರ್ಷೋದ್ಗಾರ ನಡುವೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಬೈಲಹೊಂಗಲ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನದ ರಥೋತ್ಸವ ಭಕ್ತರ ಹಷೋದ್ಗಾರ, ವಾದ್ಯಮೇಳಗಳೊಂದಿಗೆ  ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ತಳಿರು, ತೋರಣ, ವಿದ್ಯುತ್ ದೀಪಾಲಂಕಾರ, ಹೂವು ಮಾಲೆಗಳಿಂದ ದೇವಸ್ಥಾನ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿಯವರೆಗೆ ಭಕ್ತರು ದೇವಸ್ಥಾನಕ್ಕೆ ಕಾಯಿ, ಕರ್ಪೂರ, ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಶ್ರದ್ಧೆ, ಭಕ್ತಿಯಿಂದ ರಥೋತ್ಸವ ಎಳೆದರು. ಹೂವು, ಹಣ್ಣು, ಖಾರಿಕ್ ಸಮರ್ಪಿಸಿದರು. ದೇವಸ್ಥಾನ ಆವರಣದಿಂದ ಆರಂಭವಾದ ರಥೋತ್ಸವ ಬಜಾರ ರಸ್ತೆ ಮಾರ್ಗವಾಗಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು.

ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೊಡ್ಡ ದೇವರ ದೇವಸ್ಥಾನದ ಭಜನಾ ಮಂಡಳಿಯಿಂದ ರಥಕ್ಕೆ ಬೃಹತ್ ಹೂವಿನ ಮಾಲೆ ಅರ್ಪಿಸಲಾಯಿತು. ರಾಮಲಿಂಗಯ್ಯ ಪೂಜಾರ, ಹರ್ಷ ಪೂಜಾರ, ರಾಮಲಿಂಗ ಕುಡಸೋಮಣ್ಣವರ, ಬಾಬು ಕುಡಸೋಮಣ್ಣವರ,  ಶಿವಬಸ್ಸು ಕುಡಸೋಮಣ್ಣವರ, ಬಸವರಾಜ ಅವರಾದಿ, ವಿಠ್ಠಲ ಬೆಳವಡಿ, ಸಂತೋಷ ಹುಣಶೀಕಟ್ಟಿ, ಶಿವಬಸ್ಸು ಲಿಂಬೆನ್ನವರ, ಕುಮಾರ ಹೂಗಾರ ಇತರರು ಇದ್ದರು.