ಜಿಲ್ಲೆ

ಛಾಯಗ್ರಾಹಕರಿಗೆ ಕರೊನಾ ಎಫೆಕ್ಟ್

Chitradurga

ಹಿರಿಯೂರು: ಕರೊನಾ ವೈರಸ್ ಎಫೆಕ್ಟ್‌ನಿಂದ ವೃತ್ತಿಪರ ಛಾಯಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ನೆರವಿಗೆ ಧಾವಿಸಬೇಕು ಎಂದು ತಾಲೂಕು ಛಾಯಾಚಿತ್ರ-ವಿಡೊಯೋಗ್ರಾಹಕರ ಸಂಘದವರು ತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ತಾಲೂಕಾಧ್ಯಕ್ಷ ಎಂ.ಎಲ್.ಗಿರಿಧರ್ ಮಾತನಾಡಿ, ಲಾಕ್‌ಡೌನ್ ಘೋಷಣೆ ನಂತರ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಸ್ಥಗಿತವಾಗಿದ್ದು, ಛಾಯಾಗ್ರಾಹಕರು ಕೆಲಸವಿಲ್ಲದೆ ಮನೆ ಸೇರಿದ್ದು, ಕುಟುಂಬ-ಜೀವನ ನಿರ್ವಹಣೆ ಕಷ್ಟವಾಗಿದೆ. ರಾಜ್ಯ-ಕೇಂದ್ರ ಸರ್ಕಾರ ತಕ್ಷಣ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ಕಾಂತರಾಜ್, ದರ್ಶನ್, ಪ್ರಶಾಂತ್, ಹರ್ಷ ಇತರರಿದ್ದರು.