ಜಿಲ್ಲೆ

ಕೋಳಿ ಸಾಕಣೆಯಿಂದ ಆರ್ಥಿಕ ಸಂಕಷ್ಟ ನಿವಾರಣೆ

Chitradurga

ಹಿರಿಯೂರು: ರೈತರು ಕೃಷಿ ಚಟುವಟಿಕೆ ಜತೆ ಕೋಳಿ ಸಾಕಣೆ ಮಾಡಿದರೆ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಹೇಳಿದರು.

ತಾಲೂಕಿನ ಪಿ.ಡಿ. ಕೋಟೆ ಬಳಿ ಮಂಗಳವಾರ ಆಯೋಜಿಸಿದ್ದ ಕೋಳಿ ಸಾಕಣೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಯಲು ಸೀಮೆ ರೈತರಿಗೆ ಕೋಳಿ ಸಾಕಣೆ ಲಾಭದಾಯಕ ಉದ್ಯಮವಾಗಿದೆ. ಸರ್ಕಾರ ಕುಕ್ಕುಟೋದ್ಯಮಕ್ಕೆ ಪ್ರೋತ್ಸಾಹ ನೀಡುವ ಜತೆಗೆ ಕೋಳಿ ಸಾಕಣೆಯನ್ನು ಕೃಷಿ ಎಂದು ಪರಿಗಣಿಸಿ ಬಡ್ಡಿ ರಹಿತ ಸಾಲ ಸೌಲಭ್ಯ, ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ಸುಗುಣ ಕಂಪನಿ ವ್ಯವಸ್ಥಾಪಕ ಅಯ್ಯಪ್ಪ ಮಾತನಾಡಿ, ಕುಕ್ಕುಟೋದ್ಯಮಕ್ಕೆ ಕರೋನ ವೈರಸ್ ಭೀತಿ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ರೈತರಿಗೆ ಇದರ ಬಗ್ಗೆ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.

ಹಿರಿಯೂರು, ಶಿರಾ, ಚಳ್ಳಕೆರೆ ತಾಲೂಕುಗಳಿಂದ ಆಗಮಿಸಿದ್ದ ರೈತರಿಗೆ ಕೋಳಿ ಸಾಕಣೆ ಕುರಿತು ಅಗತ್ಯ ಮಾಹಿತಿ ನೀಡಲಾಯಿತು.

ಪಾಂಡಪ್ಪ, ಜಗದೀಶ್, ರಂಗಸ್ವಾಮಿ, ಕೃಷ್ಣಮೂರ್ತಿ, ಉದಯ್, ಗೋವಿಂದರಾಜ್, ರಾಮಕೃಷ್ಣಪ್ಪ, ಹನುಮಂತರಾಯ, ಶ್ರೀನಾಥ್ ಇತರರಿದ್ದರು.