ಜಿಲ್ಲೆ

13ಕ್ಕೆ ನಿವೃತ್ತ ನೌಕರರ ದಿನಾಚರಣೆ

Chitradurga

ಹಿರಿಯೂರು: ನಿವೃತ್ತ ನೌಕರ ದಿನಾಚರಣೆ ಹಾಗೂ ಪ್ಯಾಕೆಟ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಜ.13ಕ್ಕೆ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್.ಏಕಾಂತಪ್ಪ ತಿಳಿಸಿದ್ದಾರೆ.

ಕೊಂಡ್ಲಹಳ್ಳಿ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ ಸಮಾರಂಭ ಉದ್ಘಾಟಿಸಲಿದ್ದಾರೆ.

ಹಿರಿಯ ನಾಗರಿಕ ಆರ್.ರಂಗಪ್ಪರೆಡ್ಡಿ ಅವರನ್ನು ಸನ್ಮಾನಿಸಲಾಗುವುದು. ನೌಕರ ಸಂಘದ ತಾಲೂಕಾಧ್ಯಕ್ಷ ಮಧುರೆ ಬಿ.ರಮೇಶ್, ಕಾರ್ಯದರ್ಶಿ ಬಿ.ರಮೇಶ್, ಎಸ್.ತಮ್ಮಣ್ಣ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.