ಜಿಲ್ಲೆ

ಅಂಗವೈಕಲ್ಯ ಮೆಟ್ಟಿ ನಿಂತರೆ ಸಾಧನೆ ಸಾಧ್ಯ

Chitradurga

ಹಿರಿಯೂರು: ಅಂಗವಿಕಲರು ವೈಕಲ್ಯವನ್ನು ಮೆಟ್ಟಿ ನಿಂತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಸುಂದರ್‌ರಾಜ್ ಹೇಳಿದರು.

ನಗರದ ರೋಟರಿ ಭವನದಲ್ಲಿ ರೆಡ್ ಕ್ರಾಸ್-ರೋಟರಿ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಅಂಗವಿಕಲರಿಗೆ ಗಾಲಿ ಕುರ್ಚಿ ವಿತರಿಸಿ ಮಾತನಾಡಿದರು.

ರೋಟರಿ ಅಧ್ಯಕ್ಷ ಎಚ್.ಎಸ್.ಪ್ರಶಾಂತ್ ಮಾತನಾಡಿ, ಸಿರಿತನದಿಂದ ಆರೋಗ್ಯ ಸಂಪಾದಿಸಲಾಗದು. ಇರುವ ಹಣದಲ್ಲಿ ಒಂದಷ್ಟು ಅಂಗವಿಕಲರ ಶ್ರೇಯಸ್ಸಿಗೆ ಮೀಸಲಿಡುವುದರಿಂದ ಸ್ವಾಸ್ಥೃ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಬೆಂಗಳೂರಿನ ಸದಾಶಿವನ ನಗರದ ರೋಟರಿ ಸಂಸ್ಥೆಯಿಂದ 90 ಅಂಗವಿಕಲರಿಗೆ ಗಾಲಿ ಕುರ್ಚಿ ವಿತರಿಸಲಾಯಿತು.

ರೋಟರಿ ಜಿಲ್ಲಾ ಗೌರ‌್ನರ್ ನಯನ್ ಎಸ್.ಪಾಟೀಲ್, ಆರಾಧ್ಯ, ಮಹೇಶ್, ಉಮೇಶ್ ಹಬ್ಬಾರ್, ವಸಂತಚಂದ್ರ, ಎ.ಸುರೇಶ್, ರಾಮಚಂದ್ರ ಚಿನ್ಯಾ, ಶಶಿಧರ್, ಬಿ.ಎಸ್.ನವಾಬ್ ಸಾಬ್, ಎಸ್.ಎನ್.ಮಂಜುನಾಥ್, ಎಂ.ಎಸ್.ರಾಘವೇಂದ್ರ, ನಾಗರಾಜನ್, ಎ.ರಾಘವೇಂದ್ರ, ಮಧುಸೂದನ್, ಜೋಗರಾಂ, ಸಣ್ಣಭೀಮಣ್ಣ ಇತರರಿದ್ದರು.