ಜಿಲ್ಲೆ

ಆಯುರ್ವೇದ ಚಿಕಿತ್ಸೆ ಉತ್ತಮ

Chitradurga

ಹಿರಿಯೂರು: ಆಯುರ್ವೇದ ಚಿಕಿತ್ಸೆಗೆ ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧಿಗೊಳಿಸುವ ಶಕ್ತಿಯಿದೆ ಎಂದು ಜಿಪಂ ಸದಸ್ಯೆ ಶಶಿಕಲಾ ಸುರೇಶ್ ಬಾಬು ಹೇಳಿದರು.

ತಾಲೂಕಿನ ಮಲ್ಲೇಣು ಗ್ರಾಮದಲ್ಲಿ ಆಯುಷ್ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದವು ವ್ಯಕ್ತಿಯ ರೋಗ ನಿವಾರಣೆಯೊಂದಿಗೆ ಜೀವನ ಶೈಲಿ, ವ್ಯಕ್ತಿತ್ವ ಎಲ್ಲವನ್ನು ಬದಲಾಯಿಸುತ್ತದೆ. ಇಂದಿನ ಆಧುನಿಕ ಜೀವನ ಶೈಲಿ, ಅತಿಯಾದ ಜಂಕ್ ಫುಡ್ ಸೇವನೆ, ಸಮಸ್ಯೆಗಳ ಪರಿಹಾರಕ್ಕೆ ಸುಲಭದ ಮಾರ್ಗಗಳನ್ನು ಹುಡುಕಿಕೊಳ್ಳುವ ಧಾವಂತ ಇಂದಿನ ಸಮಾಜದ್ದಾಗಿದೆ ಎಂದರು.

ಇದು ತಾತ್ಕಾಲಿಕ ಪರಿಹಾರ ನೀಡಬಲ್ಲದೇ ಹೊರತು ಶಾಶ್ವತವಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕು. ನಮ್ಮ ಋಷಿ ಮುನಿಗಳು, ಪೂರ್ವಜರು ಕಂಡುಕೊಂಡ ಆರೋಗ್ಯ ಚಿಕಿತ್ಸಾ ವಿಧಾನವನ್ನು ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ತಾಪಂ ಉಪಾಧ್ಯಕ್ಷೆ ಜಯಲಕ್ಷ್ಮಿ, ಡಾ.ವಿಶ್ವಾನಾಥ್, ಶಿಕ್ಷಣ ಸಂಯೋಜಕ ಶಶಿಧರ್, ಗ್ರಾಪಂ ಸದಸ್ಯರಾದ ಅಶ್ವಿನಿ, ಶ್ರೀನಿವಾಸ್, ನಾಗರಾಜ್, ಎಪಿಎಂಸಿ ಸದಸ್ಯ ನಿಂಗಣ್ಣ, ಕಂದಿಕೆರೆ ಸುರೇಶ್ ಬಾಬು ಇತರರಿದ್ದರು.