ಹಿರಿಯೂರು: ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಂಡು ವೈಯಕ್ತಿಕ ಸ್ವಚ್ಛತೆ ಜತೆಗೆ ಮಾಸ್ಕ್ ಧರಿಸುವ ಮೂಲಕ ಕರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ವಿವಿ ಪುರ ಗ್ರಾಪಂ ಸದಸ್ಯ ಎ.ಉಮೇಶ್ ಮನವಿ ಮಾಡಿದರು.
ತಾಲೂಕಿನ ಭರಮಗಿರಿ ಗ್ರಾಮದಲ್ಲಿ ಸೋಮವಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೇತೃತ್ವದ ರಕ್ತ ಮಾದರಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಜನರು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಟಿಎಚ್‌ಒ ಡಾ.ವೆಂಕಟೇಶ್, ಡಾ.ಶ್ರೀಹರ್ಷ, ಡಾ.ಸುನೀತಾ, ಗ್ರಾಪಂ ಅಧ್ಯಕ್ಷ ವೆಂಕಟೇಶ್, ವಿಶ್ವನಾಥ್, ಪಿಡಿಒ ಹನ್ಸಿರಾ ಬಾನು, ಮಂಜಮ್ಮ, ಮಹೇಶ್, ವಿಶ್ವನಾಥ್, ಪ್ರಭಾಕರ್, ಕುಮಾರ್, ವೀಣಾ, ಪುಷ್ಪಾ, ಸಿಪಿಐ ರಾಘವೇಂದ್ರ, ಎಸ್‌ಐ ಪರಮೇಶ್ ಇತರರಿದ್ದರು.