ಜಿಲ್ಲೆ

ಹುತಾತ್ಮ ಸೈನಿಕರಿಗೆ ಗೌರವ ಸಮರ್ಪಣೆ

ಹಿರಿಯೂರು: ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರ ಪುಣ್ಯಸ್ಮರಣೆ ನಿಮಿತ್ತ ಭಾನುವಾರ ತಾಲೂಕು ಯುತ್ ಕಾಂಗ್ರೆಸ್ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಬ್ರೆಡ್, ಹಾಲು, ಉಪಾಹಾರ ವಿತರಿಸಲಾಯಿತು.

ಯುತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್ ಮಾತನಾಡಿ, ದೇಶದ ಭದ್ರತೆ, ನಾಗರಿಕರ ಪ್ರಾಣ,ಮಾನ ರಕ್ಷಣೆಯಲ್ಲಿ ಜೀವ ಪಣಕ್ಕಿಟ್ಟು ಹೋರಾಡುವ ಯೋಧರನ್ನು ಸ್ಮರಿಸುವುದು ಪ್ರತಿ ಭಾರತೀಯನ ಕರ್ತವ್ಯ. ಕೇವಲ ಪ್ರಚಾರ, ಅಧಿಕಾರಕ್ಕಾಗಿ ಹುತಾತ್ಮ ಯೋಧರನ್ನು ಸ್ಮರಿಸುವುದನ್ನು ಬಿಟ್ಟು ದೇಶದ ಬಗ್ಗೆ ನೈಜ ಕಾಳಜಿ ತೋರಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ. ರಮೇಶ್, ಸಿಗ್ಬತ್ ಉಲ್ಲಾ, ಕಾರ್ಮಿಕ ಘಟಕದ ಅಧ್ಯಕ್ಷ ಜಿ.ದಾದಾಪೀರ್, ಜ್ಞಾನೇಶ್, ಶಿವಕುಮಾರ್, ಸಾದಿಕ್, ಇಮ್ರಾನ್, ಶಿವಪ್ಪನಾಯಕ್, ಹರೀಶ್ ಮತ್ತಿತರರಿದ್ದರು.