ಜಿಲ್ಲೆ

ಕೃಷಿ ಉತ್ಪನ್ನಗಳ ಮುಕ್ತ ಸಾಗಣೆ-ಮಾರಾಟ

Chitradurga

ಖಂಡೇನಹಳ್ಳಿ ಬಸವರಜ್ ಹಿರಿಯೂರು: ಲಾಕ್‌ಡೌನ್ ಮತ್ತು ಪೊಲೀಸರ ಲಾಠಿ ಏಟಿನ ಭಯಕ್ಕೆ ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರಾಟಕ್ಕೆ ತೀವ್ರ ಹೊಡೆತ ಬಿದ್ದಿದೆ.

ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳನ್ನು ಮುಕ್ತ ಸಾಗಣೆ-ಮಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳುತ್ತಿದ್ದರು, ಪೊಲೀಸರ ಲಾಠಿ ಭಯಕ್ಕೆ ಖರೀದಿದಾರರು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ.

ಪರಿಣಾಮ ಹಣ್ಣು, ತರಕಾರಿ, ಹೂವು ಬೆಳೆಯನ್ನು ರೈತರು ಹೊಲದಲ್ಲಿಯೇ ನಾಶ ಪಡಿಸುತ್ತಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರಣಿ ಸಭೆಗಳಲ್ಲಿಯೇ ಕಾಲದೂಡುತ್ತಿರುವುದು ಕೃಷಿಕರಲ್ಲಿ ಆಕ್ರೋಶ ಉಂಟು ಮಾಡಿದೆ.

ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇದ್ದರು ಮಾರಾಟ ಸಾಧ್ಯವಾಗಿಲ್ಲ. ಇದರ ಲಾಭ ಪಡೆಯುತ್ತಿರುವ ವರ್ತಕರು, ಅತಿ ಕಡಿಮೆ ಬೆಲೆಗೆ ಹಣ್ಣು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

ರೈತರ ಹಿತ ಕಾಯುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಕೃಷಿ ಉತ್ಪನ್ನಗಳನ್ನು ತಾಲೂಕಿನ ಅಕ್ಷಯ ಪುಡ್ ಪಾರ್ಕ್‌ನಲ್ಲಿ ಸಂಗ್ರಹಿಸಿ, ಲಾಕ್‌ಡೌನ್ ತೆರವಾದ ನಂತರ ಮಾರಾಟ ಮಾಡುವಂತೆ ರೈತರಿಗೆ ಸಲಹೆ ನೀಡಿದ್ದರೂ ಯಾರು ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತೋಟಗಾರಿಕೆ ಬೆಳೆಗಳ ವಿಸ್ತೀರ್ಣ. ಪಪ್ಪಾಯ: 190 ಹೆ. ದಾಳಿಂಬೆ: 1711 ಹೆ. ಕಲ್ಲಂಗಡಿ: 103 ಹೆ. ಕರ್ಬೂಜ: 51 ಹೆ. ಬಾಳೆ: 1376 ಹೆಕ್ಟೇರ್. ಹೂವು: 475 ಹೆ. ನಷ್ಟ: ಅಂದಾಜು 100 ಕೋಟಿ ರೂ.