ಹಿರಿಯೂರು; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಜನಪ್ರತಿನಿಧಿಗಳ ಪ್ರಾತಿನಿಧ್ಯ ಬರಬೇಕೆಂದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಅಬ್ಬಿನಹೊಳೆ ಪಿಎಸ್‌ಐ ಚಂದ್ರಶೇಖರ್ ಹೇಳಿದರು.
ತಾಲೂಕಿನ ಧರ್ಮಪುರ ಪಂಚಲಿಂಗೇಶ್ವರ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ವಿ.ವೀರಣ್ಣ, ಉಪನ್ಯಾಸಕ ಎಂ.ಜಿ.ರಂಗಸ್ವಾಮಿ ಮಾತನಾಡಿದರು. ಪ್ರಾಂಶುಪಾಲ ಆ.ದೋ.ಪಾಂಡುರಂಗಯ್ಯ, ಪ್ರೊ.ಬಿ.ಶ್ರೀನಿವಾಸ್, ರಮೇಶ್, ಕುಮಾರ್, ಗಿರಿಜಮ್ಮ, ಸವಿತಾ ಇದ್ದರು.