ಜಿಲ್ಲೆ

ಬೆಸ್ಕಾಂ ಕಚೇರಿಯಲ್ಲಿ ಕರೊನಾ ಜಾಗೃತಿ

Chitradurga

ಹಿರಿಯೂರು: ಕರೊನಾ ವೈರಸ್ ಸೋಂಕು ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಬೆಸ್ಕಾಂ ಕಚೇರಿ ಆವರಣದಲ್ಲಿ ಸಿಬ್ಬಂದಿ, ಗುತ್ತಿಗೆದಾರರು, ರೈತರಿಗೆ ಬುಧವಾರ ಅರಿವು ಮೂಡಿಸಲಾಯಿತು.

ಇಇ ಕುಲ್ಮೆ ಮಹಮ್ಮದ್ ಸಾಹೇಬ್ ಮಾತನಾಡಿ, ಬೆಸ್ಕಾಂ ಕಚೇರಿಗೆ ನಿತ್ಯ ನೂರಾರು ರೈತರು, ಗುತ್ತಿಗೆದಾರರು, ಬರುವುದರಿಂದ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.

ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗ್ರಾಹಕರು ಕಚೇರಿಗೆ ಭೇಟಿ ನೀಡುವ ಸಮಯದಲ್ಲಿ ಸುರಕ್ಷತಾ ಕ್ರಮ ಪಾಲಿಸಬೇಕು. ವಿದ್ಯುತ್ ಬಿಲ್ ಆನ್‌ಲೈನ್ ಮೂಲಕ ಪಾವತಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಎಇಇ ತಿಮ್ಮರಾಯಪ್ಪ, ಚೈತ್ರಾ, ಬ್ಯಾಡರಹಳ್ಳಿ ಲೋಕೇಶ್, ಕೇಶವಮೂರ್ತಿ, ಮಂಜುನಾಥ್, ಮುಸ್ತಾಕ್, ಷಣ್ಮುಖ ಇತರರಿದ್ದರು.