ಜಿಲ್ಲೆ

ಕಾರ್ಮಿಕರಿಗೆ 1 ಸಾವಿರ ಕಿಟ್ ವಿತರಣೆ

Chitradurga

ಹಿರಿಯೂರು: ನಗರದ ವಿವಿಧೆಡೆ ನೆಲೆಸಿರುವ ಸ್ಲಂ ನಿವಾಸಿಗಳಿಗೆ ಭಾನುವಾರ ಗೊಲ್ಲ ಸಮುದಾಯದಿಂದ 1 ಸಾವಿರ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.

ಜಿಲ್ಲಾ ಗೊಲ್ಲ ಸಂಘದ ಅಧ್ಯಕ್ಷ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ, ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನವೀಯ ಧರ್ಮ. ಈ ಸಮಯದಲ್ಲಿ ಜನಪ್ರತಿನಿಧಿಗಳು ಜನರಿಗೆ ನೆರವಿನ ಹಸ್ತ ಚಾಚಬೇಕು ಎಂದು ತಿಳಿಸಿದರು.

ಸಮಾಜದ ಮುಖಂಡರಾದ ವಿಶ್ವನಾಥ್, ಜಿ.ಪ್ರೇಮ್‌ಕುಮಾರ್, ಚಿತ್ರಜಿತ್ ಯಾದವ್, ಶಿವರಂಜನಿ, ಪ್ರಭು ಯಾದವ್, ರವಿ, ಶ್ರೀನಿವಾಸ್, ಚಿದಾನಂದ್ ಇತರರಿದ್ದರು.