ಹಿರಿಯೂರು: ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ವ್ಯಕ್ತಪಡಿಸುವಂತೆ ಆಗ್ರಹಿಸಿ ಮಾ.11ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾದಿಗ ದಂಡೋರ ಸಂಸ್ಥಾಪಕ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಶನಿವಾರ ಮಾಲಾರ್ಪಣೆ ಮಾಡಿ ಮಾತನಾಡಿ, ಮೀಸಲಾತಿ ಭಿಕ್ಷೆಯಲ್ಲ, ಅದು ಶೋಷಿತರ ಹಕ್ಕು. ಸದಾಶಿವ ಆಯೋಗದ ವರದಿಗೆ ರಾಜಕೀಯ ಬಣ್ಣ ಬಳಿದು, ಚುನಾವಣೆ ಪ್ರಣಾಳಿಕೆಗೆ ಸೀಮಿತ ಮಾಡಲಾಗಿದೆ ಎಂದು ದೂರಿದರು.
ರಾಜ್ಯಾಧ್ಯಕ್ಷ ನರಸಪ್ಪ, ಮಹಾಪ್ರದಾನ ಕಾರ್ಯದರ್ಶಿ ದೇವರಾಜ್, ನಗರಸಭೆ ಮಾಜಿ ಅಧ್ಯಕ್ಷ ಮಂಜುಳಾ, ಎಚ್.ಆರ್.ಶಿವಮ್ಮ, ನಾಗೇಶ್, ಲಕ್ಷ್ಮಿ ಇತರರಿದ್ದರು.