ಜಿಲ್ಲೆ

ಹಿರಿಯಜ್ಜಿ ಕೈಗೆ ಕೊಣ್ಣೂರು ಆಡಳಿತ

ವೀರೇಶ ಸೌದ್ರಿ

ನರಗುಂದ: ತಾಲೂಕಿನ ಕೊಣ್ಣೂರು ಗ್ರಾಪಂ ಅಧ್ಯಕ್ಷೆಯಾಗಿ 83 ವರ್ಷದ ಮೆಹಬೂಬಿ ಹುಸೇನಸಾಬ ಮುದಕವಿ ಹಾಗೂ ಉಪಾಧ್ಯಕ್ಷರಾಗಿ ಸಂಗನಗೌಡ ಬಸನಗೌಡ ಪಾಟೀಲ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಬಿ. ಶಿರಿಯಪ್ಪಗೌಡ್ರ ಮಾತನಾಡಿ, ಗ್ರಾಮದ ಬಸ್ ನಿಲ್ದಾಣ, ಸ್ಮಶಾನ, ಸಾರ್ವಜನಿಕ ಶೌಚಗೃಹ, ರಸ್ತೆಗಳ ಅಭಿವೃದ್ಧಿ ಜತೆಗೆ ಸರ್ಕಾರದ ಜನಪರ ಯೋಜನಗಳ ಅನುಷ್ಠಾನಕ್ಕೆ ವಿಶೇಷ ಮುತುವರ್ಜಿ ವಹಿಸಿ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಮಾತನಾಡಿದರು.

ಬಾಬಣ್ಣ ಹಿರೇಹೊಳಿ, ಮಲ್ಲನಗೌಡ ಯಲ್ಲಪ್ಪಗೌಡ್ರ, ಬೀಬಿಜಾನ ನರಗುಂದ, ಭೀಮಪ್ಪ ಹೊರಕೇರಿ, ಹನುಮಂತ ಅಣ್ಣಿಗೇರಿ, ಹನುಮಂತ ಚಿನ್ನಾರ, ಸಿದ್ಧರಾಜ ಅಣ್ಣಿಗೇರಿ, ಜಯಶ್ರೀ ಶಿವಪ್ಪಯ್ಯನವರಮಠ, ಸಿದ್ದವ್ವ ಕಳಸಣ್ಣವರ, ಹುಸೇನಬಿ ಬುರಡಿ, ಪ್ರಕಾಶ ಚಂದಣ್ಣವರ, ಚಾಂದಬೀಬಿ ಸನ್ನಿ, ಮಮತಾಜಬೇಗಂ ಕುರ್ಲಗೇರಿ, ಗೂಳಪ್ಪ ಹುಜರತ್ತಿ, ಬಸವರಾಜ ಶೆಲ್ಲಿಕೇರಿ, ಪಿಡಿಒ ಮಂಜುನಾಥ ಗಣಿ, ಕೆ.ಎಚ್.ವಾಸನ, ಆರ್.ಎಂ.ಪಾಟೀಲ, ಉಮೇಶ ಹಿರೇಹೊಳಿ, ಬಸು ವಾಸನ, ಕೆ.ಬಿ.ಕೆಂಚನಗೌಡ್ರ, ವಿಶ್ವನಾಥ ಕಂಬಳಿ, ಗೂಡುಸಾಬ ಹದ್ಲಿ, ಷಹಜಾನ ಮುದಕವಿ ಇತರರಿದ್ದರು.