ಜಿಲ್ಲೆ

ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾವ್ ಇನ್ನಿಲ್ಲ

lakshmihegde

ಉಡುಪಿ: ಯಕ್ಷಗಾನದ ಹಿರಿಯ ಕಲಾವಿದ, ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್​ (101) ಇಂದು ನಿಧನರಾದರು.

ಹಿರಿಯಡ್ಕ ಗೋಪಾಲರಾವ್ ಅವರು ಏರು ಮದ್ದಳೆಯ ಅನ್ವೇಷಕ ಎಂದೇ ಚಿರಪರಿಚಿತರಾಗಿದ್ದರು. ಅಮೆರಿಕ ಸೇರಿ ಹಲವು ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದರು. ಕನ್ನಡ ರಾಜ್ಯೋತ್ಸವ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿಸುತ್ತಿದ್ದರು.

ಯಕ್ಷಗಾನ ವಿದ್ವಾಂಸೆ, ಸಂಶೋಧನಾ ಪ್ರಬಂಧ ಮಂಡಿಸಿದ ಮೊದಲ ವಿದೇಶಿ ಮಹಿಳೆ ಮಾರ್ತಾ ಆಸ್ಡಿನ್ ಹಿರಿಯಡ್ಕ ಗೋಪಾಲ್ ರಾವ್ ಅವರೇ ಯಕ್ಷಗುರು.