ಜಿಲ್ಲೆ

ಹಿರೀಸಾವೆಯಲ್ಲಿ ದೇವಾಲಯದ ಲೋಕಾರ್ಪಣೆ

ಎ. ಆರ್. ರಘುರಾಮ

ಹಿರೀಸಾವೆ: ಇಲ್ಲಿನ ಕೆರೆ ಏರಿ ಮೇಲಿನ ಶ್ರೀ ಬ್ರಹ್ಮೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಮತ್ತು ಗೋಪುರದ ಕಳಶ ಪ್ರತಿಷ್ಠಾಪನಾ ಕಾರ್ಯಕ್ರಮ ಸೋಮವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮುಂಜಾನೆ ಸುಪ್ರಭಾತ, ಅಷ್ಠಬಂದ ಪ್ರತಿಷ್ಠೆ, ನೇತ್ರೋನ್ಮಿಲನ, ಪ್ರಾಣಪ್ರತಿಷ್ಠೆ, ಪೂಜಾಂಗ ಪ್ರತಿಷ್ಠಾಂಗ, ರಾಕ್ಷೋಜ್ಞ, ವಾಸ್ತುಹೋಮ, ಶಿವಪಂಚಾಕ್ಷರಿ ಹೋಮಗಳ ಪೂರ್ಣಾಹುತಿ ಇತ್ಯಾದಿ ವಿಧಿ, ವಿಧಾನಗಳು ವೇದ ಘನಪಾಠಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಂಪನ್ನಗೊಂಡವು. ಶಾಸಕ ಬಾಲಕೃಷ್ಣ, ಮುಖಂಡರಾದ ವಿಜಯಕುಮಾರ, ರಾಮಕೃಷ್ಣ, ಫಣೀಶ್, ರಘು, ರವಿಕುಮಾರ್, ಮಹೇಶ್, ಅರಳಿ ಮರದ ಕುಮಾರ, ಬಾಲಕೃಷ್ಣ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.