ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಭಾರತ ಸೇವಾದಳದ ರಾಷ್ಟ್ರೀಯ ಭಾವೈಕ್ಯ ಮಕ್ಕಳ ಮೇಳಕ್ಕೆ ತಯಾರಿ ನಡೆಸಿರುವ ವಿದ್ಯಾರ್ಥಿಗಳು.  
ಜಿಲ್ಲೆ

ರಾಷ್ಟ್ರೀಯ ಭಾವೈಕ್ಯ ಮೇಳಕ್ಕೆ ಹಿರೇಮಸಳಿ ಸಜ್ಜು

ಇಂಡಿ: ಸುದೀರ್ಘಾವಧಿ ಬಳಿಕ ತಾಲೂಕು ಮಟ್ಟದ ಭಾರತ ಸೇವಾದಳದ ರಾಷ್ಟ್ರೀಯ ಭಾವೈಕ್ಯ ಮಕ್ಕಳ ಮೇಳಕ್ಕೆ ಹಿರೇಮಸಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಜ್ಜಾಗುತ್ತಿದೆ.

ಭಾರತ ಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಫೆ. 24ರಂದು ಮೇಳ ಆಯೋಜಿಸಲಾಗಿದ್ದು, ಅದಕ್ಕಾಗಿ ತಯಾರಿ ಜೋರಾಗಿದೆ. ಈಗಾಗಲೇ ಕಳದೊಂದು ವಾರದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಕೋಲಾಟ, ಲೇಜಿಂ, ಪಥ ಸಂಚಲನ, ನೃತ್ಯ ಮತ್ತಿತರ ಕಲಾ ಪ್ರಕಾರಗಳ ಕುರಿತು ತರಬೇತಿ ನೀಡಲಾಗುತ್ತಿದೆ.

ಅಂತಿಮ ಹಂತದ ತಯಾರಿ ನಡೆದಿದ್ದು, ಇಡೀ ಗ್ರಾಮವೇ ಮಕ್ಕಳ ಕಲರವವನ್ನು ಕಣ್ತುಂಬಿಕೊಳ್ಳುತ್ತಿದೆ. ಮಹತ್ವದ ಕಾರ್ಯಕ್ರಮಕ್ಕಾಗಿ ಗ್ರಾಮಸ್ಥರು ಕಾತರದಿಂದ ಕಾಯುತ್ತಿದ್ದಾರೆ.

ಅಂದು ಮಧ್ಯಾಹ್ನ 3ಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಮೇಳದ ಉದ್ಘಾಟನೆ ನೆರವೇರಿಸಲಿದ್ದು, ೇತ್ರ ಶಿಣಾಧಿಕಾರಿ ಟಿ.ಎಸ್​. ಆಲಗೂರ, ದೈಹಿಕ ಶಿಣಾಧಿಕಾರಿ ಜಿ.ಎಸ್​. ಮಳಗೊಂಡ, ಸೇವಾದಳ ವಿಭಾಗೀಯ ಸಂಟನಾಧಿಕಾರಿ ನಾಗೇಶ ಡೋಣೂರ, ಭಾರತ ಸೇವಾದಳ ತಾಲೂಕು ಕಾರ್ಯದರ್ಶಿ ಅಂಬಣ್ಣ ಸುಣಗಾರ, ತಾಲೂಕು ಅಧಿನಾಯಕ ಜಿ.ಜಿ. ಬರಡೋಲ, ೇತ್ರ ಸಮನ್ವಯ ಅಧಿಕಾರಿ ಎಸ್​.ಆರ್​. ನಡಗಡ್ಡಿ, ಸಿಆರ್​ಪಿ ಎಸ್​.ಜಿ.ಕ್ಯಾತ, ಪತ್ರಕರ್ತ ಪರಶುರಾಮ ಭಾಸಗಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ತಾಲೂಕಿನ 60 ಶಾಲೆಗಳ ಮಕ್ಕಳು ಭಾಗವಹಿಸುವರು ಎಂದು ಶಾಲೆ ಮುಖ್ಯಾಧ್ಯಾಪಕ ಆನಂದ ಕೆಂಭಾವಿ ತಿಳಿಸಿದ್ದಾರೆ.