ಜಿಲ್ಲೆ

ಪಲಾವ್ ತಿಂದು ವೃದ್ಧ ಸಾವು, ಆತನ ಪತ್ನಿ ಮೂವರು ಆಸ್ಪತ್ರೆಗೆ ದಾಖಲು

Haveri - Kariyappa Aralikatti

ಹಾವೇರಿ: ತಾವು ಮಾಡಿದ ಪಲಾವ್ ತಿಂದು ಒಂದೇ ಕುಟುಂಬದ ನಾಲ್ವರು ಅಸ್ವಸ್ಥಗೊಂಡು ಅದರಲ್ಲಿ ವೃದ್ಧ ಓರ್ವ ಮೃತಪಟ್ಟ ಘಟನೆ ಹಿರೇಕೆರೂರ ತಾಲೂಕಿನ ಸಾತೇನಹಳ್ಳಿಯಲ್ಲಿ ನಡೆದಿದೆ.
ಬಸನಗೌಡ ಹನುಮಗೌಡ ಪಾಟೀಲ (98) ಮೃತ ವೃದ್ಧ. ಇವರ ಪತ್ನಿ ಪುಟ್ಟವ್ವ ಪಾಟೀಲ, ಪುತ್ರಿ ಪ್ರೇಮಾ ಅಂಗಡಿ, ಮೊಮ್ಮಗಳಾದ ಅಪೂರ್ವ ಅಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ಮನೆಯಲ್ಲಿ ಕಳೆದ 2 ವರ್ಷದಿಂದ ಊಟದಲ್ಲಿ ಏರು ಪೇರು ಆಗುತ್ತಿತ್ತು. ಜೂ. 5ರಂದು ಕಾರು ಹುಣ್ಣಿಮೆ ದಿನದಂದು ಎಲ್ಲರೂ ಪಲಾವ್ ತಿಂದು ಮಲಗಿದ್ದರು. ಆದರೆ, ಮರುದಿನ ಬೆಳಗ್ಗೆ ಎಲ್ಲರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಹಿರೇಕೆರೂರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬಸನಗೌಡ ಮೃತಪಟ್ಟಿದ್ದಾರೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.