ಹಿರೇಕೆರೂರ: ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಆಶೀರ್ವಾದದಿಂದ ಕಲಾವಿದ ಗುರುಶಾಂತ ಯತ್ತಿನಹಳ್ಳಿ ಸಾರಿಥ್ಯದಲ್ಲಿ ಮೂಡಿಬರುತ್ತಿರುವ ‘ಋಣ’ ಕಿರುಚಿತ್ರದ ಚಿತ್ರೀಕರಣ ಆರಂಭದ ಪೂಜಾ ಕಾರ್ಯಕ್ರಮ ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆಯಿತು.
ಚಲನಚಿತ್ರ, ಕಿರುತೆರೆ ಕಲಾವಿದ ಗುರುಶಾಂತ ಯತ್ತಿನಹಳ್ಳಿ ವಿಜಯವಾಣಿಯೊಂದಿಗೆ ಮಾತನಾಡಿ, ಸ್ಥಳೀಯ ಕಲಾವಿದರನ್ನು ಬೆಳಸುವ ಉದ್ದೇಶದಿಂದ ಋಣ ಕಿರುಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದಲ್ಲಿ ಗ್ರಾಮೀಣ ಕಲಾವಿದರು ವಿವಿಧ ಪಾತ್ರಗಳಲ್ಲಿ ನಟಿಸುತ್ತಿದ್ದು, ಆಲದಕಟ್ಟಿ, ದೂಪದಹಳ್ಳಿ, ದುರ್ಗಾದೇವಿ ದೇವಸ್ಥಾನ ಸೇರಿ ಸ್ಥಳೀಯ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು. ಚಿತ್ರನಿರ್ದೇಶಕ ಮತ್ತು ಬರಹಗಾರರಾಗಿ ರಕ್ಷಿತ್ ಶೆಟ್ಟಿ, ಛಾಯಾಗ್ರಹಣ ಶ್ರೇಯಸ್ ರಿಚ್ಚು, ನಾಯಕ ನಟನಾಗಿ ಮೋಹನ್ ಶೆಟ್ಟಿ, ನಟಿಯಾಗಿ ಸ್ಥಳೀಯ ಕಲಾವಿದೆ ಸ್ವಕೃತಿ ಎಸ್.ಎ., ಖಳನಾಯಕನಾಗಿ ವಿಹಾನ್ ಪ್ರಬಂಜನ್, ಪೋಷಕ ಕಲಾವಿದನಾಗಿ ಬೆನಕ ಚನ್ನ, ಪಪಂ ಸದಸ್ಯ ಹರೀಶ ಕಲಾಲ್, ಹನುಮಂತ ಕುರಬರ, ಸತೀಶ ಕೋರಿಗೌಡ್ರ, ಅಶ್ವಿನಿ ಕೊಂಡಜ್ಜಿಯವರ ನಟಿಸಲಿದ್ದಾರೆ ಎಂದರು. ಎಸ್.ಆರ್. ಪಿಳಿಮಠ, ಬಸವಕುಮಾರಶಾಸ್ತ್ರೀ ಮಳಲಿಮಠ, ಶಂಬು ವಾಲಿ, ಮಲ್ಲಿಕಾರ್ಜುನ ಕೊಂಡಜ್ಜಿಯವರ ಇದ್ದರು.