ಹಿರೇಕೆರೂರ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತಾಲೂಕಿನ ಫಲಾನುಭವಿಗಳಿಗೆ ಶೇ. 50ರ ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರ ಮತ್ತು ನೆಲಹಾಸುಗಳು ಮಂಜೂರಾಗಿವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2023-24ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಕಳಿನ ನೆಲಹಾಸು (ಮ್ಯಾಟ್) ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಗುರುವಾರ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಪ್ರತಿ ಫಲಾನುಭವಿಗೆ ತಲಾ ಒಂದು ಮೇವು ಕತ್ತರಿಸುವ ಯಂತ್ರ ಹಾಗೂ ಎರಡು ನೆಲಹಾಸುಗಳಂತೆ ಶೇ. 50ರಷ್ಟು ಸಹಾಯಧನ ನೀಡಲಾಗಿದೆ. ಮೇವು ಕತ್ತರಿಸುವ ಯಂತ್ರದ ಒಟ್ಟು ಘಟಕದ ವೆಚ್ಚ 33 ಸಾವಿರ ರೂ.ಗಳಾಗಿದ್ದು, ಅದರಲ್ಲಿ 16,500 ರೂ. ಫಲಾನುಭವಿ ವಂತಿಗೆ ಹಾಗೂ 16,500 ಸಹಾಯಧನವಿದೆ. ತಾಲೂಕಿನ ಒಟ್ಟು 60 ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ ಹಾಗೂ 30 ಫಲಾನುಭವಿಗಳಿಗೆ ಆಕಳಿನ ನೆಲಹಾಸು (ಮ್ಯಾಟ್) ಗಳನ್ನು ವಿತರಿಸಲಾಗುತ್ತಿದೆ ಎಂದರು.
ತಾಲೂಕಿನ ಸಂಚಾರಿ ಪಶು ಚಿಕಿತ್ಸೆ ವಾಹನವನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಾಪಂ ಇಒ ಶಶಿಧರ ಎಚ್., ಮುಖ್ಯ ಪಶುವೈದ್ಯಾಧಿಕಾರಿ ಡಾ. ಕಿರಣ ಎಲ್., ಡಾ. ಪ್ರವೀಣ ಮರಿಗೌಡ್ರ, ಡಾ.ನವೀನಕುಮಾರ ಆರ್.ಎಚ್., ಡಾ. ಮಂಜುನಾಥ ಮಾಯಾಚಾರಿ, ಡಾ. ಶಂಕರಪ್ಪ ಯಲೇದಹಳ್ಳಿ, ಡಾ. ಸಚಿನ್ ಲಮಾಣಿ ಹಾಗೂ ಫಲಾನುಭವಿಗಳು ಇದ್ದರು.