ಜಿಲ್ಲೆ

ದೊಡ್ಡ ಕೆರೆಗೆ ಬಿ.ಸಿ. ಪಾಟೀಲ ಬಾಗಿನ

Haveri

ಹಿರೇಕೆರೂರ: ತಾಲೂಕಿನ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿದ್ದು, ರೈತರು ನೆಮ್ಮದಿಯಿಂದ ಬದುಕುವಂತಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ತಾಲೂಕಿನ ಆಲದಗೇರಿ ಗ್ರಾಮದ ದೊಡ್ಡ ಕೆರೆ ತುಂಬಿ ಕೋಡಿ ಹರಿದಿದ್ದರಿಂದ ಮಂಗಳವಾರ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಎಲ್ಲರೂ ಗ್ರಾಮದ ಕೆರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ರೈತರ ಹಿತ ಕಾಪಾಡುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದ್ದು, ಹಂತ ಹಂತವಾಗಿ ರೈತರ ಪರ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಜಲ ಜನರ ಜೀವನಾಡಿಯಾಗಿದ್ದು, ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ಅಂತರ್ಜಲ ವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಬರ ಕಡಿಮೆಯಾಗಲಿದೆ ಎಂದರು. ಅಜ್ಜಯ್ಯ ಸ್ವಾಮಿ ಆರಾಧ್ಯಮಠ, ನಿಜಲಿಂಗಪ್ಪ ಅರಳಿಕಟ್ಟಿ, ಮಂಜುನಾಥ ಚಲವಾದಿ, ಚಂದ್ರಪ್ಪ ಮುದಕನಗೌಡ್ರ, ಮರಲಿಂಗಪ್ಪ ಉಕ್ಕುಂದ, ಧರ್ಮಪ್ಪ ಭೂತನವರ, ಕರಿಯಪ್ಪ ಚಲವಾದಿ, ಮಂಜಪ್ಪ ಮಾಸಣಗಿ, ಇದ್ದರು.