ಜಿಲ್ಲೆ

ದೇಶದಲ್ಲಿ ಇತಿಹಾಸ ಸೃಷ್ಟಿಸಿದ ಸಿಎಂ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಹಿರೇಕೆರೂರ: ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ 5 ಭರವಸೆಗಳಲ್ಲಿ 4 ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಸರ್ವಜ್ಞ ಕಲಾಭವನದಲ್ಲಿ ತಾಪಂ, ತಾಲೂಕು ಆಡಳಿತ, ಪಪಂ, ಸಿಡಿಪಿಒ ಇಲಾಖೆಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ ಗೃಹ ಲಕ್ಷ್ಮೀ ಯೋಜನೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಯೋಜನೆಗಳು ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತವೆ. ಕಾಂಗ್ರೆಸ್ ಸರ್ಕಾರ ಎಲ್ಲಿಯವರೆಗೆ ಅಧಿಕಾರದಲ್ಲಿ ಇರುತ್ತದೆ ಅಲ್ಲಿಯವರೆಗೆ ಈ ಯೋಜನೆಗಳು ಜಾರಿಯಲ್ಲಿರುತ್ತವೆ. ತಾಲೂಕಿನಲ್ಲಿ 54 ಸಾವಿರ ಜನ ನೋಂದಣಿಯಾಗಿದ್ದು, ಅದರಲ್ಲಿ ಪಟ್ಟಣದ 6,041 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಸದುಪಯೋಗ ಪಡೆಯಲಿದ್ದಾರೆ ಎಂದರು.
ತಹಸೀಲ್ದಾರ್ ಡಾ. ಎಚ್. ಪ್ರಭಾಕರಗೌಡ, ಸಿಡಿಪಿಒ ಜಯಶ್ರೀ ಪಾಟೀಲ ಮಾತನಾಡಿದರು. ತಾಪಂ ಇಒ ಎನ್. ಶಶಿಧರ್, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ಕಂಠಾಧರ ಅಂಗಡಿ, ಅಲ್ತಾಫಖಾನ್ ಪಠಾಣ, ವಿಜಯಶ್ರೀ ಬಂಗೇರ, ಕವಿತಾ ಹಾರ‌್ನಳ್ಳಿ, ಕುಸುಮಾ ಬಣಕಾರ, ಸುಧಾ ಚಿಂದಿ, ಶಂಶಾದಬೀ ಕುಪ್ಪೆಲೂರ, ಪೂಜಾ ತಂಬಾಕದ, ನಾಗರತ್ನ ಕೋರಿಗೌಡ್ರ, ರಜಿಯಾ ಅಸದಿ, ಬಸವರಾಜ ಕಟ್ಟಿಮನಿ, ಹರೀಶ ಕಲಾಲ್, ಹನುಮಂತ ಕುರಬರ, ರಾಜು ಕರಡಿ, ಸನಾವುಲ್ಲಾ ಮಕಾಂದಾರ, ರಮೇಶ ಕೋಡಿಹಳ್ಳಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಮತ್ತು ಫಲಾನುಭವಿಗಳು ಇದ್ದರು. ಪಪಂ ಮುಖ್ಯಾಧಿಕಾರಿ ಪಂಪಾಪತಿ ನಾಯಕ್, ಸಹಾಯಕ ಅಧಿಕಾರಿ ಕೆ.ಎಂ. ಪುಟ್ಟಕ್ಕಳವರ ನಿರ್ವಹಿಸಿದರು.