ಜಿಲ್ಲೆ

ಬನ್ನಿಮಹಾಂಕಾಳಿ ದೇವಿಗೆ ವಿಶೇಷ ಪೂಜೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಹಿರೇಕೆರೂರ: ಪಟ್ಟಣದ ಮದ್ವೀರಶೈವ ಸಮಾಜದಿಂದ ದಸರಾ ಹಬ್ಬದ ನಿಮಿತ್ತ ಶನಿವಾರ ಬನ್ನಿಮಹಾಂಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಳಗ್ಗೆ ಪೇಟೆ ಮತ್ತು ಬಯಲು ಬಸವೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಬಸವನ ಬೀದಿಯ ಶೆಟ್ಟರ ಮನೆಯಿಂದ ಮದ್ವೀರಶೈವ ಸಮಾಜದ ಅಧ್ಯಕ್ಷ ವಿ.ಡಿ. ಹಂಪಾಳಿ ಅಧ್ಯಕ್ಷತೆಯಲ್ಲಿ ಸಮ್ಮಾಳ ವಾದ್ಯದೊಂದಿಗೆ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಬನ್ನಿಮಂಟಪಕ್ಕೆ ಆಗಮಿಸಿತು. ಅಲ್ಲಿನ ಬನ್ನಿಗಿಡಕ್ಕೆ ಬಸವಕುಮಾರಶಾಸ್ತ್ರೀ ಮಳಲಿಮಠ ಹಾಗೂ ಶಿವಾನಂದಯ್ಯಶಾಸ್ತ್ರೀ ಪಿಳಿಗಿಮಠ ಅವರ ವೈದಿಕತ್ವದಲ್ಲಿ ವಿವಿಧ ಧಾರ್ವಿುಕ ಕೈಂಕರ್ಯಗಳು ನೆರವೇರಿಸಿ ಬನ್ನಿ ಮುಡಿಯಲಾಯಿತು. ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಪರಸ್ಪರ ಬನ್ನಿ ಪತ್ರಿ ಹಂಚಿಕೊಳ್ಳಲಾಯಿತು.

ಮದ್ವೀರಶೈವ ಸಮಾಜದ ಉಪಾಧ್ಯಕ್ಷ ಆರ್.ಬಿ. ಹಂಜಿ, ಕಾರ್ಯದರ್ಶಿ ಇಂದುಧರ ಹಿರೇಮಠ, ಧರ್ಮದರ್ಶಿ ಕಂಠಾಧರ ಅಂಗಡಿ, ಚನ್ನವೀರಪ್ರಭು ಕುಬಸದ, ರಾಜು ತಿಪ್ಪಶೆಟ್ಟಿ, ಬಾಬು ಅಣಗೊಂಡರ, ಈರಣ್ಣ ಹಳ್ಳೂರ, ಇಂದುಧರ ಹಳಕಟ್ಟಿ, ಶಿವಯೋಗಿ ಕಾಯಕದ, ಮಹೇಶ ಅಸುಂಡಿ, ಸಿದ್ದಲಿಂಗೇಶ ಶೆಟ್ಟರ, ರುದ್ರಪ್ಪ ಶೆಟ್ಟರ, ಮುಖಂಡರಾದ ಬಸವರಾಜ ಹಂಪಾಳಿ, ಬಸವರಾಜ ಹಲವಾಗಿಲ, ಶಂಭು ಹಂಜಿ, ಸಿದ್ದು ಶೆಟ್ಟರ, ಉಮೇಶ ಹಳಕಟ್ಟಿ, ಶಂಕ್ರು ಕೋರಿ, ರಾಕೇಶ ಶೆಟ್ಟರ, ನಾಗರಾಜ ರಾಯನಗೌಡ್ರ, ಸತೀಶ ಕೋರಿಗೌಡ್ರ, ಎಸ್.ಎಂ. ಕಾಟಾಪುರ, ಮೃತ್ಯುಂಜಯ ಕಲ್ಯಾಣಿ, ಮಲ್ಲಿಕಾರ್ಜುನ ಹಳಕಟ್ಟಿ, ಶಿತಲ್ ಶೆಟ್ಟರ, ಮುತ್ತಣ್ಣ ಶೆಟ್ಟರ ಹಾಗೂ ಭಕ್ತರು ಪಾಲ್ಗೊಂಡಿದ್ದರು.