ಕೊಪ್ಪಳ:ತಾಲೂಕಿನ ಕಿನ್ನಾಳ ಬಳಿಯ ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಮಂಗಳವಾರ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಬಾಗಿನ ಅರ್ಪಿಸಿದರು.
ಡ್ಯಾಂ 1.62 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ಸಂಪೂರ್ಣ ಭರ್ತಿಯಾಗಿದೆ. ಕಿನ್ನಾಳ, ಮುದ್ಲಾಪುರ ಸೇರಿ ಇತರ ಗ್ರಾಮಗಳಿಗೆ ಜೀವನಾಡಿಯಾಗಿದೆ. 20 ಸಾವಿರ ಎಕರೆಗೆ ನೀರುಣಿಸುತ್ತಿದೆ. ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಎಇಇ ಪಂಪಾಪತಿ, ಪ್ರಮುಖರಾದ ಅಶೋಕ ಚಿತ್ರಗಾರ, ಪಂಪಾಪತಿ ಹಿರೇಮಠ, ಮಂಜುನಾಥ ಜನಾದ್ರಿ, ಬಸವರಾಜ ಪರಗಿ, ವಿಠಲ್ ಕುದ್ರಿಮೋತಿ, ಮುತ್ತಣ್ಣ ಕುಂದಾರಿ, ರಾಘವೇಂದ್ರ ಆಚಲಕರ, ಸಂಗಮೇಶ ಬಾದವಾಡಗಿ, ಮನೋಹರ ಗೌಡ ಇತರರಿದ್ದರು.