ಕನಕಗಿರಿ ತಾಲೂಕಿನ ಹಿರೇ ಮಾದಿನಾಳ ಗ್ರಾಮದ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ಅಧಿಕ ಮಾಸದಂಗವಾಗಿ 33 ಜೋಡಿಗಳಿಂದ ಏಕಕಾಲಕ್ಕೆ ಪವಮಾನ ಹೋಮ ನಡೆಯಿತು. ನಿವೃತ್ತ ಶಿಕ್ಷಕ ಪ್ರಲ್ಹಾದರಾವ್ ದಂಪತಿ ಇತರರು ಇದ್ದರು. 
ಜಿಲ್ಲೆ

ಹಿರೇ ಮಾದಿನಾಳದಲ್ಲಿ ಪವಮಾನ ಹೋಮ

Kopala - Desk - Eraveni

ಕನಕಗಿರಿ: ಅಧಿಕ ಮಾಸ ಅಂಗವಾಗಿ ತಾಲೂಕಿನ ಹಿರೇ ಮಾದಿನಾಳದ ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಪವಮಾನ ಹೋಮ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಂಧನೂರಿನ ಬಾಲ ಗೋಪಾಲದಾಸ ಮಾತನಾಡಿ, ಹಿಂದು ಪಂಚಾಂಗದಲ್ಲಿ 4 ವರ್ಷಕ್ಕೊಮ್ಮೆ ಅಧಿಕ ಮಾಸ ಬರುತ್ತದೆ. ವ್ರತಾಚರಣೆಗಳಿಗೆ ಈ ಮಾಸ ಹೇಳಿ ಮಾಡಿಸಿದ್ದಾಗಿದೆ.

ಅದಕ್ಕಾಗಿ ದೇವರ ಸ್ತೋತ್ರ, ಪಾರಾಯಣ, ಸಂಗೀತದ ಮೂಲಕ ಸ್ಮರಣೆ ಮಾಡುವುದು ಸೇರಿ ನಾನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಪವಮಾನ ಹೋಮದಲ್ಲಿ ಪಾಲ್ಗೊಂಡ 33 ದಂಪತಿಗೆ ಬಾಗಿನ ನೀಡಲಾಗಿದೆ ಎಂದು ತಿಳಿಸಿದರು.

ಕೃಷ್ಣಾಚಾರ್ಯ ರಾಜಪುರೋಹಿತ, ಅನಂತಾಚಾರ್ಯ ಮತ್ತು ಗೋವಿಂದಾಚಾರ್ಯರು ಕಾರ್ಯಕ್ರಮದ ಪೌರೋಹಿತ್ಯ ವಹಿಸಿದ್ದರು. ಇದೇ ವೇಳೆ ಗ್ರಾಮದ ನೂತನ ಅಗಸಿ ಬಾಗಿಲಿಗೆ ನಿವೃತ್ತ ಶಿಕ್ಷಕ ಪ್ರಲ್ಹಾದ್‌ರಾವ್ ಮಾದಿನಾಳ ಭೂಮಿಪೂಜೆ ಸಲ್ಲಿಸಿದರು.