ಜಿಲ್ಲೆ

ಮದ್ಯದಂಗಡಿಗೆ ಕಾವಲುಗಾರರ ನೇಮಿಸಿ, ಪೊಲೀಸ್ ವೃತ್ತ ನಿರೀಕ್ಷಕ ಶಿವಣ್ಣ ಸೂಚನೆ ಕಳ್ಳಬಟ್ಟಿ ಮಾಹಿತಿ ನೀಡಲು ಸಲಹೆ

Bengaluru Rural

ನೆಲಮಂಗಲ: ಮದ್ಯದಂಗಡಿ ಕಳವು ಪ್ರಕರಣ ಹೆಚ್ಚುತ್ತಿದ್ದು, ಮಾಲೀಕರು ಕಾವಲುಗಾರರನ್ನು ನೇಮಿಸಿಕೊಳ್ಳುವಂತೆ ವೃತ್ತ ನಿರೀಕ್ಷಕ ಶಿವಣ್ಣ ತಿಳಿಸಿದರು.

ತಾಲೂಕಿನ ಅರಶಿನಕುಂಟಿ ಗ್ರಾಮದ ನೆಲಮಂಗಲ ಗ್ರಾಮಾಂತರ ಠಾಣೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಾರ್ ಆ್ಯಂಡ್ ರೆಸ್ಟೊರೆಂಟ್ ಮಾಲೀಕರ ಸಭೆಯಲ್ಲಿ ಮಾತನಾಡಿದರು.

ಮದ್ಯವಿಲ್ಲದೆ ಕೆಲವು ಕಡೆ ಆತ್ಮಹತ್ಯೆ ಮಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ತಾಲೂಕಿನಲ್ಲಿ ಆ ರೀತಿ ಯಾವುದೇ ಆಹಿತಕರ ಘಟನೆ ಸಂಭವಿಸಿಲ್ಲ. ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಈಗಾಗಲೇ ಸರ್ಕಾರ ಸಿಲ್ ಹಾಕಿದೆ. ಅದರೆ ಕೆಲವೆಡೆ ಸೀಲ್ ಮಾಡಿದ್ದರು ಕಳ್ಳತನ ವಾಗಿರುವುದು ಅಚ್ಚರಿಯ ಸಂಗತಿ. ಆದ್ದರಿಂದ ಬಾರ್ ಮತ್ತು ರೆಸ್ಟೋರೆಂಟ್ ಮುಂದೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು ಹಾಗೂ ತಾಲೂಕಿನಲ್ಲಿ ಕಳ್ಳಬಟ್ಟಿ, ನೀರಾ ಮಾಡುತಿದ್ದವರ ಬಗ್ಗೆ ಮಾಹಿತಿ ಸಿಕ್ಕರೆ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು.

ಗ್ರಾಮಾಂತರ ಠಾಣೆ ಎಸ್‌ಐ ವಿ.ಅಂಜನ್‌ಕುಮಾರ್, ರಾಮಚಂದ್ರಪ್ಪ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್‌ಸ್ವಾಮಿ, ಉಪಾಧ್ಯಕ್ಷ ಬಾರ್ ಆನಂದ್, ಬಾರ್ ಮಾಲೀಕರರಾದ ವಿಜಯ್‌ಚಂದ್ರರೆಡ್ಡಿ, ಮುನಿರಾಜು, ರವಿಕುಮಾರ್, ಹನುಮಂತಯ್ಯ, ರವಿ ಮತ್ತಿತರರು ಉಪಸ್ಥಿತರಿದ್ದರು.