ಜಿಲ್ಲೆ

ಹಿಪ್​ ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ

ಬೆಲಹೊಂಗಲ: ದೊಡ್ಡ, ದೊಡ್ಡ ನಗರಗಳ ಆಸ್ಪತ್ರೆಯಲ್ಲಿ ಲಾಂತರ ರೂಪಾಯಿ ವೆಚ್ಚದ, ಕ್ಲಿಷ್ಟವಾದ ಸೊಂಟದ ಹಿಪ್​ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಪಟ್ಟಣದ ಚನ್ನಮ್ಮಾ ಸಮಾಧಿ ರಸ್ತೆಯಲ್ಲಿರುವ ಚಿದಂಬರ ಚೆತನ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಖ್ಯಾತ ಎಲುಬು, ಕೀಲು ತ ಡಾ. ಸಾಗರ ಕುಲಕರ್ಣಿ ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಈ ಚಿಕಿತ್ಸೆ ನೆರವೇರಿಸಿ ಸಾಧನೆ ಮಾಡಿದ್ದಕ್ಕೆ ಸಾರ್ವಜನಿಕರಿಂದ, ವೆದ್ಯರಿಂದ ಶ್ಲಾನೆ ವ್ಯಕ್ತವಾಗಿದೆ. 27ರ ಹರೆಯದ ಯುವಕರೊಬ್ಬರಿಗೆ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರೋಗಿಯು 50 ಅಡಿ ದೂರ ನಡೆಯಲು ಅಸಮರ್ಥನಾಗಿದ್ದ. ಟಿಎಚ್​ಆರ್​ ಚಿಕಿತ್ಸೆ ನಂತರ ಎಂಟು ದಿನದಲ್ಲಿ ವಾಕರ್​ ಇಲ್ಲದೆ ನಡೆಯಲಾರಂಭಿಸಿದ್ದಾರೆ.

ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಒದಗಿಸಿದ್ದಕ್ಕೆ ರೋಗಿಯ ಶಸ್ತ್ರಚಿಕಿತ್ಸೆ ನಡೆಸಿದ ಖ್ಯಾತ ಎಲುಬು, ಕೀಲು ತ ಡಾ. ಸಾಗರ ಕುಲಕರ್ಣಿ ಹಾಗೂ ಅವರ ತಂಡದ ಕಾರ್ಯಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು. ಸ್ತ್ರೀ ರೋಗ ತಜ್ಞೆ ಡಾ.ಅಪೂರ್ವಾ ಬೆಳಗಾಂವಕರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.