ಜಿಲ್ಲೆ

ವರ್ಷಾಂತ್ಯದಲ್ಲಿ ವಿವಾದಗಳದ್ದೇ ಸದ್ದು

ಸುನಿಲ್ ಪೊನ್ನೇಟಿ

ಮಡಿಕೇರಿ:

ವರ್ಷದ ದ್ವಿತೀಯಾರ್ಧದಲ್ಲಿ ಕೊಡಗಿನಲ್ಲಿ ವಿವಾದಗಳೇ ಸದ್ದು ಮಾಡಿದವು. ಇದೇ ಮೊದಲ ಬಾರಿಗೆ ಡಿಸೆಂಬರ್ ತಿಂಗಳಿನಲ್ಲೂ ಮಳೆಗಾಗಿ ರೆಡ್ ಅಲರ್ಟ್ ಘೋಷಣೆ ಆಗಿದ್ದಲ್ಲದೆ, ಶಾಲಾ-ಕಾಲೇಜುಗಳಿಗೆ ರಜೆಯೂ ಕೊಡುವಂತೆ ಆಯಿತು. ಜನೋತ್ಸವ ದಸರಾ, ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಜಾತ್ರೆ ವಿಜೃಂಭಣೆಯ ಆಚರಣೆಗಳಿಗೆ ಸಾಕ್ಷಿ ಆಯಿತು. ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊಡಗಿನ ಯೋಧನ ಸಾವು ವರ್ಷಾಂತ್ಯದಲ್ಲಿ ಕಹಿ ನೆನಪಾಗಿ ಉಳಿಯುವಂತಾಯಿತು.

ವಾಡಿಕೆಗಿAತ ಹೆಚ್ಚು ಸುರಿದ ಮಳೆ

ಬೇಸಿಗೆಯಲ್ಲಿ ಮಳೆಯ ಕೊರತೆ ಜಿಲ್ಲೆಯನ್ನು ಕಾಡಿದರೆ, ಜೂನ್ ನಂತರ ಡಿಸೆಂಬರ್ ತನಕವೂ ಪ್ರತಿ ತಿಂಗಳು ಮಳೆ ಮುಂದುವರಿದಿತ್ತು. ಈ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಪ್ರಾಣ ಹಾನಿ ಸಂಭವಿಸಲಿಲ್ಲ. ಆದರೆ ಸಿದ್ದಾಪುರದ ಕವಿತಾ ಮತ್ತು ರವಿ ದಂಪತಿ ಪುತ್ರ 9 ವರ್ಷದ ರೋಹಿತ್ ಎಂಬಾತ ವಯನಾಡಿನಲ್ಲಿ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ್ದ. ಈ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಕೃಷಿ ಹಾನಿ ಆಗಿದೆ. ಭತ್ತ ನಾಟಿ ಸಂದರ್ಭದಲ್ಲೇ ಅತಿವೃಷ್ಟಿಯಿಂದಾಗಿ ನಾಟಿಗೆ ಸಿದ್ಧವಾಗಿದ್ದ ಪೈರು ಕೊಳೆತು ಹೋಗಿ ನಷ್ಟ ಆದರೆ, ನವೆಂಬರ್-ಡಿಸೆAಬರ್‌ನಲ್ಲಿ ಕೊಯ್ಲಿನ ಸಂದರ್ಭದಲ್ಲಿ ಚಂಡಮಾರುತ ಪ್ರಭಾವದಿಂದ ಸುರಿದ ಮಳೆ ಅಲ್ಪ ಸ್ವಲ್ಪ ಉಳಿದಿದ್ದ ಬೆಳೆ ಮಣ್ಣು ಪಾಲಾಗುವಂತೆ ಆಯಿತು. ಆ.2ಕ್ಕೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು.

ಕಾಫಿಗೆ ಉತ್ತಮ ಬೆಲೆ ಇದೆ. ಆದರೆ ಫಸಲು ಇಲ್ಲ

ಈ ವರ್ಷ ಕಾಫಿಗೆ ಉತ್ತಮ ಬೆಲೆ ಬಂದಿದೆ. ಹಾಗೆಂದು ಬೆಳೆಗಾರ ಖುಷಿ ಪಡುವ ಸ್ಥಿತಿಯಲ್ಲಿ ಇಲ್ಲ. ಬೇಸಿಗೆಯ ಅನಾವೃಷ್ಟಿ, ಮಳೆಗಾಲದ ಅತಿವೃಷ್ಟಿ ಕಾರಣಕ್ಕೆ ಬಹುತೇಕ ತೋಟಗಳಲ್ಲಿ ಕಾಫಿ ಫಸಲು ಇಲ್ಲ. ಇದೀಗ ನವೆಂಬರ್-ಡಿಸೆAಬರ್ ತಿಂಗಳಿನಲ್ಲೂ ಬೆಳೆಗಾರರನ್ನು ಮಳೆ ದೊಡ್ಡ ಮಟ್ಟದಲ್ಲಿ ಕಾಡಿದೆ. ಗಿಡದಲ್ಲಿ ಇರುವ ಫಸಲು ಕಟಾವಿಗೆ ಸಮಸ್ಯೆ ಆದರೆ, ಕಟಾವು ಮಾಡಿದ ಕಾಫಿ ಒಣಗಿಸಲು ಕೂಡ ಮಳೆಯಿಂದಾಗಿ ತೊಂದರೆ ಆಯಿತು. ಹಾಗಾಗಿ ಹೆಚ್ಚಿನ ಬೆಲೆ ಇದ್ದರೂ ಬೆಳೆ ಇಲ್ಲದೆ ಬೆಳೆಗಾರ ಕೈ ಕೈ ಹಿಚುಕಿಕೊಳ್ಳುವಂತಾಗಿದೆ. ಈ ಮಧ್ಯೆ ಕೃಷಿ ಹಾನಿಗೆ ಈ ವರ್ಷ ಪರಿಹಾರವೂ ಸಿಗದೇ ಬೆಳೆಗಾರ ಪರಿತಪಿಸುವಂತಾಗಿದೆ.

ಜನಮನ ಆಕರ್ಷಿಸಿದ ವಿಜೃಂಭಣೆಯ ದಸರಾ

ಈ ವರ್ಷ ಮಡಿಕೇರಿ ಮತ್ತು ಗೋಣಿಕೊಪ್ಪಲುವಿನಲ್ಲಿ ವಿಜೃಂಭಣೆಯಿAದ ದಸರಾ ಆಚರಿಸಲಾಯಿತು. ಇದೇ ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ಕಾಫಿ ದಸರಾ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ಕಾಫಿ ದಸರಾ ದೊಡ್ಡ ಮಟ್ಟಿಗೆ ಯಶಸ್ವಿಯೂ ಆಯಿತು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳ ದಸರಾ, ಯುವ ದಸರಾ, ಮಹಿಳಾ ದಸರಾವೂ ಜನಾಕರ್ಷಣೆ ಪಡೆದುಕೊಳ್ಳಲು ಯಶಸ್ವಿಯಾಯಿತು. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಕಾರಣ ಕೊನೆಯ ದಿನದ ದಶಮಂಟಪಗಳ ಮೆರವಣಿಗೆ ಸುಸೂತ್ರವಾಗಿ ನಡೆಯಿತು. ದಸರಾ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಡಿಕೇರಿಗೆ ಭೇಟಿ ನೀಡಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.

ಸುಸೂತ್ರವಾಗಿ ನಡೆದ ಶ್ರೀ ಕಾವೇರಿ ತೀರ್ಥೋದ್ಭವ ಜಾತ್ರೆ

ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯಲ್ಲಿ ಈ ವರ್ಷ ಕಾವೇರಿ ತೀರ್ಥೋದ್ಭವ ಅ.17ರ ಮುಂಜಾನೆ 6.40ಕ್ಕೆ ಸಂಭವಿಸಿತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ತೀರ್ಥೋದ್ಭವ ಸಂದರ್ಭ ಸೇರಿದ್ದರು. ಒಂದು ತಿಂಗಳ ಕಾಲ ಶ್ರೀ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಸಂಭ್ರಮದಿAದ ಜಾತ್ರೋತ್ಸವ ನಡೆಯಿತು. ಈ ಸಂದರ್ಭ ಅನ್ನದಾನವನ್ನೂ ಏರ್ಪಡಿಸಲಾಗಿತ್ತು. ಈ ವರ್ಷ ಕುಶಾಲನಗರದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮ ದೊಡ್ಡ ಮಟ್ಟದ ಯಶಸ್ವಿ ಕಾಣುವಂತಾಯಿತು. ಭವಿಷ್ಯದಲ್ಲಿ ಮಡಿಕೇರಿ ದಸರಾ ಮಾದರಿಯ ಆಚರಣೆ ಮುನ್ಸೂಚನೆ ಇಲ್ಲಿ ಸಿಕ್ಕಿತು. ಕೈಲ್‌ಮುಹೂರ್ತ ಮತ್ತು ಹುತ್ತರಿ ಹಬ್ಬವನ್ನೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಮೈಸೂರು ದಸರಾದಲ್ಲಿ ಕೊಡಗಿನ ಆನೆಗಳ ದರ್ಬಾರ್

ಜಂಬೂ ಸಾವಾರಿಯೇ ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಇದರಲ್ಲಿ ಪಾಲ್ಗೊಳ್ಳುವ ಆನೆಗಳ ಪೈಕು ಬಹುತೇಕ ಆನೆಗಳು ಕೊಡಗಿನ ಆನೆ ಶಿಬಿರಗಳಲ್ಲಿ ತಂಗಿರುತ್ತದೆ. ಹಾಗಾಗಿ ದಸಾಕ್ಕಿಂತಲೂ ಮುಂಚೆ ನಡೆಯುವ ಗಜ ಪಯಣ ಸಂದರ್ಭ ಜಿಲ್ಲೆಯಿಂದ ಆನೆಗಳನ್ನು ಸಾಂಪ್ರದಾಯಿಕವಾಗಿ ಬೀಳ್ಕೊಡಲಾಗುತ್ತದೆ. ಈ ವರ್ಷ ಆ. 20ಕ್ಕೆ ಮೊದಲ ಹಂತದಲ್ಲಿ 7 ಆನೆಗಳ ಪೈಕಿ 3 ಆನೆಗಳನ್ನು ಮೈಸೂರಿಗೆ ಕಳುಹಿಸಿಕೊಡಲಾಯಿತು. ಕಂಜನ್, ಧನಂಜಯ ಹಾಗೂ ಗೋಪಿ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಪೊಲೀಸರ ಶ್ರಮಕ್ಕೆ ಸಾರ್ವಜನಿಕರ ಶಹಬ್ಬಾಸ್

ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡಲು ಕೊಡಗು ಪೊಲೀಸರು ಈ ವರ್ಷವೂ ಸಾಕಷ್ಟು ಶ್ರಮವಹಿಸಿದರು. ಅದರಲ್ಲೂ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಹೊರಾಟ ಸಾಕಷ್ಟು ಯಶಸ್ವಿಯೂ ಆಯಿತು. ಥಾಯ್‌ಲ್ಯಾಂಡ್‌ನಿAದ ಕೊಡಗಿಗೆ ತಂದಿದ್ದ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ವಶ ಪಡಿಸಿಕೊಂಡು ವಿದೇಶಿ ಡ್ರಗ್ಸ್ ಜಾಲ ಬೇಧಿಸಿದ್ದು ದೊಡ್ಡ ಸುದ್ದಿ ಆಯಿತು. ಸುಂಟಿಕೊಪ್ಪ ಸಮೀಪ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹದ ಬಗ್ಗೆ ಯಾವುದೇ ಸುಳಿವು ಇಲ್ಲದಿದ್ದರೂ ಅದೊಂದು ಕೊಲೆ ಎಂದು ಗುರುತಿಸಿ, ಬೇರೆ ಬೇರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕವೂ ಕೊಡಗು ಪೊಲೀಸರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಅಕ್ರಮವಾಗಿ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ ಜಾ ಬೇಧಿಸಿದ್ದು, ದೊಡ್ಡ ಸಾಧನೆ ಅನ್ನಿಸಿಕೊಂಡಿತು.

ಮುAದುವರಿದ ವನ್ಯಜೀವಿ-ಮಾನವ ಸಂಘರ್ಷ

ವರ್ಷದ ದ್ವಿತೀಯಾರ್ಧದಲ್ಲೂ ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಮುಂದುವರಿಯಿತು. ಭಾಗಮಂಡಲ ಬಳಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಚೇರಂಗಾಲ ಗ್ರಾಮದ 38 ವರ್ಷದ ತರುಣೇಶ್ ಕಾಣೆಯಾದ ಹಸು ಹುಡುಕುತ್ತಾ ಚರಣ್ ಮತ್ತು ರಂಜು ಎಂಬುವರ ಜತೆ ಕಾಡಿಗೆ ಹೋಗಿದ್ದರು. ಈ ವೇಳೆ ಕಾಡಾನೆಯೊಂದು ಎದುರಾಗಿತ್ತು. ಆಗ ಚರಣ್ ಮತ್ತು ರಂಜು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದರೆ, ತರುಣೇಶ್ ಮೇಲೆ ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ. ಸಾರ್ವಜನಿಕ ನಿಷೇಧಿತ ಪ್ರದೇಶವಾಗಿರುವ ತಲಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ ನಡೆದಿರುವುದರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ಗೋಣಿಕೊಪ್ಪ, ವಿರಾಜಪೇಟೆ ಭಾಗದಲ್ಲಿ ಹುಲಿ ಹಾವಳಿ ಕಂಡು ಬಂತು.

ಕೊಡಗಿಗೆ ವರವಾದ ಎಂಆರ್‌ಐ ಸ್ಕಾö್ಯನಿಂಗ್ ಘಟಕ

ಕೊಡಗು ವೈದ್ಯಕೀಯ ವಿದ್ಯಾಲಯದ ಮಡಿಕೇರಿ ಬೋಧಕ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾö್ಯನಿಂಗ್ ಘಟಕ ಈ ವರ್ಷ ಕಾರ್ಯರಂಭ ಮಾಡಿದೆ. ಮೊದಲೆಲ್ಲಾ ಎಂಆರ್‌ಐ ಸ್ಕಾö್ಯನಿಂಗ್‌ಗಾಗಿ ದೂರದ ಮೈಸೂರು, ಬೆಂಗಳೂರು ಅಥವಾ ಸುಳ್ಯ, ಮಂಗಳೂರಿಗೆ ತೆರಳಬೇಕಿತ್ತು. ಆದರೆ ಈಗ ಮಡಿಕೇರಿಯಲ್ಲೇ ಈ ಸೌಲಭ್ಯ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳಿಗೆ ಅನುಕೂಲ ಆಗಿದೆ. ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಇದ್ದರೂ ಇಲ್ಲಿಯ ಬಸ್‌ಗಳಿಗೆ ಮಂಗಳೂರು ನೋಂದಣಿ ಇರುತ್ತಿತ್ತು (ಕೆಎ19). ಆದರೆ ಇದೇ ಮೊದಲ ಬಾರಿಗೆ ಮಡಿಕೇರಿ ನೋಂದಣಿ (ಕೆಎ12) ಸಂಖ್ಯೆ ಹೊಂದಿರುವ ಅಶ್ವಮೇಧ ಬಸ್‌ಗಳ ಸಂಚಾರ ಈ ವರ್ಷ ಆರಂಭ ಆಯಿತು.

ಕೊಡಗಿಗೆ ಸಾಧನೆಯ ಸಂಭ್ರಮ

ಮಡಿಕೇರಿ ಕೊಡಗು ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಎ.ಜಿ. ಪರ್ಲಿನ್ ಪೊನ್ನಮ್ಮ ದಕ್ಷಿಣ ಭಾರತ ಸಬ್ ಜೂನಿಯರ್ ಮಹಿಳಾ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ದಕ್ಷಿಣ ಭಾರತ ತಂಡಕ್ಕೆ ನಾಯಕಿಯಾಗಿ ಆಯ್ಕೆ ಆದರು. ಕೊಡಗಿನ ಪದ್ಮಾ ಶೇಖರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಬಂತು. ದೇಶದಲ್ಲೇ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮಡಿಕೇರಿಗೆ ಮೊದಲ ಸ್ಥಾನ ಸಿಕ್ಕಿತು. ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೊಡಗು ಮೊದಲ ಸ್ಥಾನ ಪಡೆದುಕೊಂಡಿತು. ಅತ್ಯುತ್ತಮ ಸಾಧನೆ ತೋರಿಸಿದ ಮಡಿಕೇರಿ ತಾಲೂಕು ಗಾಳಿಬೀಡು ಗ್ರಾ.ಪಂ.ಗೆ 1 ಕೋಟಿ ರೂ. ಮೊತ್ತದ ರಾಷ್ಟಿçÃಯ ಪುರಸ್ಕಾರದ ಗೌರವ ಸಿಕ್ಕಿತು.

ವರ್ಷಾಂತ್ಯಕ್ಕೆ ವಿವಾದಗಳ ಸದ್ದು

ವರ್ಷಾಂತ್ಯದಲ್ಲಿ ವಿವಾದಗಳು ಸದ್ದು ಮಾಡಿದವು. ದೇಶದ ಮಹಾನ್ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ವಿರುದ್ಧ ವಕೀಲರೊಬ್ಬರು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದರು ಎನ್ನುವ ಕಾರಣಕ್ಕೆ ದೊಡ್ಡ ಮಟ್ಟದ ವಿರೋಧ ಕಂಡು ಬಂತು. ಜಿಲ್ಲೆಯಾದ್ಯಂತ ಪ್ರತಿಭಟನೆಗಳೂ ನಡೆದವು. ಕೊಡಗು ಬಂದ್ ಕೂಡ ಕರೆಯಲಾಗಿತ್ತು. ಕಟ್ಟೆಮಾಡು ಗ್ರಾಮದಲ್ಲಿ ಸಮುದಾಯವೊಂದಕ್ಕೆ ಅವರ ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ ಎನ್ನುವ ವಿಷಯವೂ ಸಾಕಷ್ಟು ಸದ್ದು ಮಾಡಿತು.

ವರ್ಷಾಂತ್ಯದ ಕಹಿ ನೆನಪು

ವರ್ಷದ ಕೊನೆಯಲ್ಲಿ ಕೊಡಗಿನ ಯೋಧ ದಿವಿನ್ ಪಳಂಗೋಟು ಹುತಾತ್ಮ ಆದ ವಿಷಯ ಜಿಲ್ಲೆಯ ಪಾಲಿಗೆ ಕಹಿ ನೆನಪಾಗಿ ಉಳಿಯುವಂತಾಯಿತು. ಕಾಶ್ಮೀರದಲ್ಲಿ ಸೇನಾವಾಹನ ಕಮರಿಗೆ ಉರುಳಿದ ಸಂದರ್ಭ ತೀವ್ರ ಗಾಯಗೊಂಡಿದ್ದ ದಿವಿನ್ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಡಿ. 29ರ ರಾತ್ರಿ ಹುತಾತ್ಮರಾದರು.