ರಾಮದುರ್ಗ: ಕಾಶ್ಮೀರದ ಪಹಲ್ಗಾಮ್ನಲ್ಲಿ ಹಿಂದುಗಳನ್ನು ಹತ್ಯೆ ಮಾಡಿರುವ ಉಗ್ರರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ತಾಲೂಕು ಟಕದ ನೇತತ್ವದಲ್ಲಿ ಪ್ರತಿಭಟಿಸಿ, ತಹಸೀಲ್ದಾರಗೆ ಮನವಿ ಸಲ್ಲಿಸಿದರು.
26 ಹಿಂದುಗಳ ಹತ್ಯೆ ಮಾಡಿರುವ ಹೇಯ ಕೃತ್ಯವನ್ನು ಹಿಶ್ವ ಹಿಂದು ಪರಿಷತ್ ಬಲವಾಗಿ ವಿರೋಧಿಸುತ್ತದೆ. ಕೂಡಲೇ ಕಾಶ್ಮೀರ ಹಾಗೂ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶಾದ್ಯಂತ ಸಂಟನೆ ನೇತತ್ವದಲ್ಲಿ ಉಗ್ರ ಹೋರಾಟ ಮಾಡಬೇಕಗುತ್ತದೆ ಎಂದು ಎಚ್ಚರಿಸಿದರು.
ವಿಶ್ವ ಹಿಂದು ಪರಿಷತ್ ತಾಲೂಕು ಟಕದ ಅಧ್ಯ ಪ್ರಕಾಶ ಸೂಳಿಭಾಂವಿ, ಮುಖಂಡರಾದ ವಿ.ಕೆ. ಜೋಶಿ, ಅಮರ ಧೂತ್, ಶ್ರೀನಿವಾಸ ಕುರುಡಗಿ, ನಾರಾಯಣ ಗಂಗೂರ, ಅರ್ಚಕ ಲಲ್ಲು ಮಹಾರಾಜ, ಪರಶುರಾಮ ಧಡಿ, ವಿನೋದ ಕರದಿನ, ಗಿರೀಶ ಕುಲಕರ್ಣಿ, ನಾಮದೇವ ಸೋರಿ, ಗುರುನಾಥ ಅರದ, ಶಂಕರ ಬೆನ್ನೂರ, ವಿ.ಎಸ್. ಮುರುಡಿ, ಅಪ್ಪಣ್ಣ ಹಡಪದ ಇತರರಿದ್ದರು.