ಸಿಂಧನೂರು: ಹಬ್ಬಗಳು ಭಾವೈಕ್ಯದ ಸಂಕೇತವಾಗಿದ್ದು, ಶಾಂತಿ, ಸೌಹಾರ್ದ ಮತ್ತು ಸಾಮರಸ್ಯದಿಂದ ಆಚರಿಸಬೇಕು ಎಂದು ಪಿಐ ದುರುಗಪ ್ಪ ಡೊಳ್ಳಿನ್ ಹೇಳಿದರು.
ಮೊಹರಂ ಹಬ್ಬದ ನಿಮಿತ್ತ ನಗರದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಜೂ.28ರಿಂದ ಮೊಹರಂ ಆಚರಿಸಲಾಗುತ್ತದೆ. ಜು.5 ಕತ್ತಲ್ ರಾತ್ರಿ ಹಾಗೂ ಜು.6ರಂದು ಪೀರಲು ದೇವರುಗಳು ದಫನ್ ಆಗಲಿವೆ. ಹಿಂದು-ಮುಸ್ಲಿಮರು ಒಗ್ಗೂಡಿ ಹಬ್ಬ ಆಚರಿಸಬೇಕು.
ಪೊಲೀಸ್ ಇಲಾಖೆ ಸೂಚಿಸುವ ನಿಯಮಗಳನ್ನು ಪಾಲಿಸಬೇಕು. ಹಬ್ಬದ ನೆಪದಲ್ಲಿ ಯುವಕರು ಮಧ್ಯರಾತ್ರಿ ಓಡಾಡುವುದು, ಬೈಕ್‌ಗಳ ಸೈಲೆನ್ಸರ್ ಕಿತ್ತು ಹಾಕಿ ಸಂಚರಿಸುವುದು, ಜಾತಿ-ಧರ್ಮಗಳ ಹೆಸರಿನಲ್ಲಿ ಗಲಾಟೆ ಮಾಡಬಾರದು ಎಂದು ತಿಳಿಸಿದರು.
ಕಸಾಪ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಮಾತನಾಡಿ, ಹಬ್ಬಗಳು ಎಲ್ಲರನ್ನು ಒಗ್ಗೂಡಿಸುವ ಪ್ರತೀಕವಾಗಿವೆ. ಮೊಹರಂ ಹಬ್ಬವನ್ನು ಮುಸ್ಲಿಮರಿಗಿಂತ ಹಿಂದುಗಳೇ ಹೆಚ್ಚಾಗಿ ಆಚರಿಸುತ್ತಾರೆ. ಅದೇನೆ ಇದ್ದರೂ ಜಾತಿ, ಧರ್ಮ ಬದಿಗಿಟ್ಟು ಸೌಹಾರ್ದ ಮತ್ತು ಸಾಮರಸ್ಯದಿಂದ ಹಬ್ಬ ಆಚರಿಸೋಣ ಎಂದರು.
ಮುಸ್ಲಿಂ ಸಮಾಜದ ಪ್ರಮುಖರಾದ ಅಜೀಜ್, ಅಯೂಬ್ ಖಾನ್, ಶಫುವುಲ್ಲಾ ಖಾನ್, ವೀರಶೈವ ಪಂಚಮಸಾಲಿ ಸಮಾಜದ ನಾಗರಾಜ ಗಸ್ತಿ ಕೋಟೆ, ಮುಖ್ಯಪೇದೆ ಸೋಮನಗೌಡ ಮಾತನಾಡಿದರು. ಈದ್ಗಾ ಕಮಿಟಿ ಅಧ್ಯಕ್ಷ ಸೈಯದ್ ಹಾರೂನ್‌ಸಾಬ್ ಜಾಗೀರದಾರ್, ಕರ್ನಾಟಕ ಮುಸ್ಲಿಂ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಫಯಾಜ್, ಮುಖಂಡರಾದ ಮುಸ್ತಫಾ ಜುವೆಲರ್ಸ್, ದಾವಲಸಾಬ್ ದೊಡ್ಮನಿ, ಹನುಮಂತ ಕಲ್‌ಶೆಟ್ಟಿ, ಅಮೀನಸಾಬ್ ನದಾಫ್, ಹಬೀಬ್ ಖಾಜಿ, ಯೂಸೂಫ್ ಏತ್ಮಾರಿ, ಚಂದಪ ್ಪ, ಷರೀಫ್, ಮೆಹಬೂಬ್ ಇದ್ದರು.