ಗದ್ದನಕೇರಿ ಕ್ರಾಸ್‌ನಲ್ಲಿ ನಿರ್ಮಿಸಿದ ಶ್ರೀ ಮಾರುತಿ ಮಂದಿರವನ್ನು ಗಿರಿಸಾಗರ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಉದ್ಘಾಟಿಸಿದರು. ಮಳೆಯಪ್ಪಯ್ಯ ಮಹಾಸ್ವಾಮಿಗಳು, ಯಲ್ಲಮ್ಮ ತಾಯಿಯವರು, ಹೂವಪ್ಪ ರಾಥೋಡ, ಶೇಖರಯ್ಯ ಹಿರೇಮಠ, ಸಂಗಣ್ಣ ನಲತವಾಡ ಮತ್ತಿತರರಿದ್ದಾರೆ. 
ಜಿಲ್ಲೆ

ಎಲ್ಲ ಆಚರಣೆಗೆ ಹಿಂದು ಧರ್ಮವೇ ಮೂಲ

ಕಲಾದಗಿ: ದೇಶದಲ್ಲಿ ಹಲವು ಧರ್ಮಿಯರು ಇದ್ದರೂ, ಅವರೆಲ್ಲರ ಆಚರಣೆ ಮತ್ತು ಧರ್ಮದ ಮೂಲ ಭಗವಂತನೊಬ್ಬನೇ ಎಂದು ಗಿರಿಸಾಗರ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಹೇಳಿದರು.

ಗದ್ದನಕೇರಿ ಕ್ರಾಸನಲ್ಲಿ ನಿರ್ಮಿಸಲಾದ ಹನುಮಾನ ಮಂದಿರ ಹಾಗೂ ಈಶ್ವರ, ಬಸವಣ್ಣ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ವಾಸ್ತುಶಾಂತಿ ಹಾಗೂ ಜಿರ್ಣೊದ್ಧಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅನೇಕ ಆಚರಣೆ ಪದ್ಧತಿಗಳಿದ್ದರು ಅದರ ಮೂಲ ಹಿಂದು ಧರ್ಮವೇ ಆಗಿದೆ. ದೇವನೊಬ್ಬ ನಾಮ ಹಲವು ಎಂಬಂತೆ ನಾವೆಲ್ಲರೂ ಪೂಜಿಸೂವ ರೀತಿ ಬೇರೆಯಾದರೂ ನಮ್ಮ ಭಕ್ತಿ ಒಬ್ಬನಿಗೇ ಸಲ್ಲುತ್ತದೆ. ನಮ್ಮ ಆಚಾರಗಳಿಗೆ ಜಾಗತಿಕ ಮಟ್ಟದಲ್ಲಿಯೂ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದಕ್ಕೆ ಪ್ರಯಾಗರಾಜ್‌ನಲ್ಲಿ ವಿದೇಶಿಗರು ಪಾಲ್ಗೊಳ್ಳುತ್ತಿರುವುದೇ ಸಾಕ್ಷಿ. ನಮ್ಮ ಧರ್ಮವನ್ನು ಆಚರಿಸುವುದರ ಜತೆಗೆ ಇತರ ಧರ್ಮಗಳನ್ನು ಗೌರವಿಸಿ ಎಂದರು.

ಮಳೆರಾಜೇಂದ್ರ ಮಠದ ಪೂಜ್ಯ ಮಳೆಯಪ್ಪಯ್ಯ ಮಹಾಸ್ವಾಮಿಗಳು, ಯಲ್ಲಮ್ಮ ತಾಯಿಯವರು, ಜಿಪಂ ಮಾಜಿ ಅದ್ಯಕ್ಷ ಹೂವಪ್ಪ ರಾಥೋಡ, ಶೇಖರಯ್ಯ ಹಿರೇಮಠ, ಸಂಗಣ್ಣ ನಲತವಾಡ, ಎಂ.ಎಚ್.ಪಡಸಾಲಿ, ಪಾಂಡಪ್ಪ ಕೆಂಗಲಗುತ್ತಿ, ಮಹದೇವಪ್ಪ ಪೂಜಾರ, ಚಂದ್ರಶೇಖರ ಸಾಳಗುಂದಿ ಮತ್ತಿತರರಿದ್ದರು.