ಜಿಲ್ಲೆ

ಹಿಂದುಗಳ ಜನಸಂಖ್ಯೆ ಹೆಚ್ಚಾಗಲಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಹಿಂದುಗಳ ಜನಸಂಖ್ಯೆ ಹೆಚ್ಚಾಗಬೇಕು. ಹಿಂದುಗಳು ತಮ್ಮಲ್ಲಿನ ಭೇದಭಾವ ತೊರೆದು, ಒಗ್ಗಟ್ಟಾಗಬೇಕು ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ ಪರಾಂಡೆ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ದಂಪತಿ ಕನಿಷ್ಠ ಎರಡು ಮಕ್ಕಳನ್ನು ಹೊಂದಬೇಕು ಎಂದು ಸಲಹೆ ನೀಡಿದರು.

ಹಿಂದುಗಳ ಜನಸಂಖ್ಯೆ ಜೊತೆಗೆ ಧನಶಕ್ತಿಯೂ ಹೆಚ್ಚಾಗಬೇಕು. ಆರ್ಥಿಕವಾಗಿ ಸದೃಢರಾಗಬೇಕು. ಆ ಮೂಲಕ ಸಾಮಾಜಿಕ ಸೇವೆಯಲ್ಲಿಯೂ ನಿರತರಾಗಬೇಕು ಎಂದು ತಿಳಿಸಿದರು.

ಮತಾಂತರ, ಲವ್​ಜಿಹಾದ್​ಗಳಂತಹ ಕುಕೃತ್ಯಗಳಿಗೆ ಕಡಿವಾಣ ಹಾಕಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಅಯೋಧ್ಯೆಯಲ್ಲಿ ಏರ್ಪಡಿಸಿದ್ದ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ 55 ದೇಶಗಳಿಗಿಂತಲೂ ಹೆಚ್ಚಿನ ದೇಶದ ಜನರು ಭಾಗವಹಿಸಿದ್ದರು. 110ಕ್ಕೂ ಹೆಚ್ಚು ದೇಶಗಳಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಸಂಭ್ರಮ ಆಚರಿಸಲಾಯಿತು ಎಂದು ಹೇಳಿದರು.

ವಿಎಚ್​ಪಿ ರಾಜ್ಯ ಕಾರ್ಯದರ್ಶಿ ಗೋವರ್ಧನ ರಾವ, ನಗರ ಅಧ್ಯಕ್ಷ ಸಂಜು ಬಡಸ್ಕರ, ಗವಿಸಿದ್ದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಭಾಸಸಿಂಗ್ ಜಮಾದಾರ, ಜೀತೇಂದ್ರ ಮಜೇಥಿಯಾ, ವಿಠ್ಠಲ ಲದ್ವಾ, ವಿನಾಯಕ ತಲಗೇರಿ, ಆನಂದ ಪಾಂಡುರಂಗಿ, ವಿವೇಕ ಪವಾರ, ಜಯತೀರ್ಥ ಕಟ್ಟಿ ಹಾಗೂ ಇತರರು ಪಾಲ್ಗೊಂಡಿದ್ದರು.