ಜಿಲ್ಲೆ

ಹಿಂದು ರುದ್ರಭೂಮಿ ಲೋಕಾರ್ಪಣೆ

Avinash R

ಮೂಲ್ಕಿ: ಶಿಥಿಲಾವಸ್ಥೆಯಲ್ಲಿದ್ದ ಮೂಲ್ಕಿ ಸಾರ್ವಜನಿಕ ಹಿಂದು ರುದ್ರಭೂಮಿ ಉದ್ಯಮಿ ಅರವಿಂದ ಪೂಂಜಾ ನೇತತ್ವದಲ್ಲಿ ನವೀಕರಣಗೊಂಡಿದ್ದು, ಅ.28ರಂದು ಬೆಳಗ್ಗೆ 11 ಗಂಟೆಗೆ ಶಾಸಕ ಉವಾನಾಥ ಕೋಟ್ಯಾನ್ ಲೋಕಾರ್ಪಣೆಗೊಳಿಸಲಿದ್ದಾರೆ.

ಹಿಂದು ರುದ್ರಭೂಮಿಯ ಚಿತಾಗಾರ ನವೀಕರಣಕ್ಕೆ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ವತಿಯಿಂದ ಹಾಗೂ ದಾನಿ ಅರವಿಂದ ಪೂಂಜಾರವರ ಸಹಕಾರದೊಂದಿಗೆ ನೂತನ ಸಿಲಿಕಾನ್ ಬಾಕ್ಸ್ ಅಳವಡಿಸಲಾಗಿದೆ. ಹಿಂದು ರುದ್ರಭೂಮಿ ಮೇಲ್ಭಾಗದ ಶಿಥಿಲಗೊಂಡ ತಗಡು ಶೀಟುಗಳನ್ನು ತೆರವುಗೊಳಿಸಿ ಹೊಸ ಶೀಟ್ ಹಾಕಲಾಗಿದೆ. ರುದ್ರಭೂಮಿಗೆ ನೂತನ ನಾಮಫಲಕ ಹಾಗೂ ಸುತ್ತಲೂ ಉದ್ಯಾನವನ ಸಹಿತ ಸ್ವಚ್ಛತೆ ಕಾಪಾಡಲು(ಕಸ, ಕಡ್ಡಿ ವಿಲೇವಾರಿಗೆ) ಪ್ರತ್ಯೇಕ ಬಾಕ್ಸ್ ಅಳವಡಿಸಲಾಗಿದೆ ಎಂದು ಹಿಂದು ರುದ್ರಭೂಮಿ ಸಂಚಾಲಕ ಅರವಿಂದ ಪೂಂಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.