ಜಿಲ್ಲೆ

ಅಂಕೋಲಾ ಠಾಣೆಗೆ ಮುತ್ತಿಗೆ ಹಾಕಿದ ಹಿಂದು ಸಂಘಟನೆ ಕಾರ್ಯಕರ್ಯರು

ಅಂಕೋಲಾ: ತಾಲೂಕಿನಲ್ಲಿ ಅನ್ಯ ಕೋಮಿನ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದನ್ನು ಖಂಡಿಸಿ ಹಿಂದು ಪರ ಸಂಘಟನೆಗಳ ಪ್ರಮುಖರು ಇಲ್ಲಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರ ಘಟನೆ ಬುಧವಾರ ನಡೆಯಿತು.

ಭಾಸ್ಕರ ನಾರ್ವೇಕರ್ ನೇತೃತ್ವದಲ್ಲಿ ಠಾಣೆಯ ಎದುರು ಸೇರಿದ ಹಲವರು ಯುವಕನ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳಬೇಕು ಮತ್ತು ಆತ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಪಿಐ ಸಂತೋಷ ಶೆಟ್ಟಿ ಮಾತ ನಾಡಿ, ನಿಮ್ಮಲ್ಲಿ ಯಾರಾದರು ದೂರು ನೀಡಿ ಇಲ್ಲವಾದಲ್ಲಿ ನಾವೇ ಸ್ವಮೊಟೊ ಪ್ರಕರಣ ದಾಖಲಿಸಿ, ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕವಾಗಿ ಆತನಿಂದ ಕ್ಷಮೆ ಕೇಳಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.
ಕೆಲವೇ ಕ್ಷಣದಲ್ಲಿ ಬಂಧನ : ಪಟ್ಟಣದ ಹುಲಿದೇವರವಾಡದ ಜಾಪರ್ ಎಂಬಾತನನ್ನು ಪೊಲೀಸರು ಕೆಲವೇ ಕ್ಷಣದಲ್ಲಿ ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಪ್ರೇರಣೆ ನೀಡಿದವರ ಮೇಲೂ ವಿಚಾರಣೆ ತನಿಖೆ ಮಾಡ ಲಾಗುವುದು ಎಂದು ಪಿಐ ಸಂತೋಷ ಶೆಟ್ಟಿ ತಿಳಿಸಿದರು.