ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆಯಲ್ಲಿ ಪಿಎಸ್‌ಐ ಅಶೋಕ ಬೇವೂರು ಮಾತನಾಡಿದರು. ಪ್ರಮುಖರಾದ ಮೈನುದ್ದಿನ್ ಖಾಜಿ, ಸೂಚಪ್ಪ ದೇವರಮನಿ, ತಿಮ್ಮನಗೌಡ ಪೊಲೀಸ್‌ಪಾಟೀಲ್, ಮರೇಗೌಡ ಬೋದುರು ಇತರರಿದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಶಾಂತಿ-ಸೌಹಾರ್ದದಿಂದ ಮೊಹರಂ ಹಬ್ಬ ಆಚರಿಸಲಿ

Gangavati - Mohan Kumar H R

ಹನುಮಸಾಗರ: ಹಿಂದು ಮತ್ತು ಮುಸ್ಲಿಂ ಸಮುದಾಯದವರ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶಾಂತಿ- ಸೌಹಾರ್ದದಿಂದ ಆಚರಣೆ ಮಾಡಬೇಕು ಎಂದು ಪಿಎಸ್‌ಐ ಅಶೋಕ ಬೇವೂರು ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ-ಸಭೆಯಲ್ಲಿ ಮಾತನಾಡಿ, ಈ ಭಾಗದಲ್ಲಿ ಹಬ್ಬವನ್ನು ಎಲ್ಲ ಧರ್ಮದವರೂ ಸೇರಿಕೊಂಡು ಶಾಂತಿಯುತವಾಗಿ ಆಚರಣೆ ಮಾಡುತ್ತಾ ಬರುತ್ತಿದ್ದು, ಈ ವರ್ಷವೂ ಹಿಂದಿನಂತೆ ಹಬ್ಬ ಆಚರಿಸಬೇಕು. ಯಾರಾದರೂ ಶಾಂತಿ ಕದಡಲು ಯತ್ನಿಸಿದರೆ ಕೂಡಲೇ ಠಾಣೆಗೆ ಮಾಹಿತಿ ನೀಡಿ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.


ಮುಖಂಡರಾದ ಮೈನುದ್ದಿನ್ ಖಾಜಿ, ಸೂಚಪ್ಪ ದೇವರಮನಿ, ತಿಮ್ಮನಗೌಡ ಪೊಲೀಸ್‌ಪಾಟೀಲ್, ಮರೇಗೌಡ ಬೋದುರು ಇತರರಿದ್ದರು.