ಜಿಲ್ಲೆ

ಹಿಂದು ಮಹಾಗಣಪತಿ ಲಡ್ಡು 2.55 ಲಕ್ಷಕ್ಕೆ ಹರಾಜು

ಪಾವಗಡ: ಪಟ್ಟಣದ ಮಧುಗಿರಿ ಊರ ಬಾಗಿಲಿನಲ್ಲಿ ವಿಶ್ವ ಹಿಂದು ಪರಿಷತ್​, ಬಜರಂಗದಳ ಹಾಗೂ ಶ್ರೀರಾಮ ಸೇನೆ ಸೇರಿದಂತೆ ಹಿಂದು ಸಂಘಟನೆಗಳು 3ನೇ ವರ್ಷದ ಹಿಂದು ಮಹಾಗಣಪತಿಯ ಪೂಜೆಗೆ ಇಟ್ಟಿದ್ದ ಲಡ್ಡು ಹರಾಜು ಪ್ರಕ್ರಿಯೆಯನ್ನು ಶುಕ್ರವಾರ ರಾತ್ರಿ ನಡೆಸಲಾಯಿತು.

ಹರಾಜಿನಲ್ಲಿ ಬತ್ತಿನೇನಿ ಅರುಣ್​ 2.55 ಲಕ್ಷ ರೂ. ಹರಾಜು ಕೂಗಿ ಲಡ್ಡನ್ನು ತಮ್ಮದಾಗಿಸಿಕೊಂಡರು. ಅವರನ್ನು ಹಿಂದು ಮಹಾಗಣಪತಿ ಸಮಿತಿಯಿಂದ ಸನ್ಮಾನಿಸಲಾಯಿತು. ಬಜರಂಗದಳದ ಶೇಖರ್​ ಬಾಬು, ರಘವೇಂದ್ರ, ಸುಬ್ಬು, ನಂಜುಂಡ, ರಾಮ್​ ಚರಣ್​, ವಂಶಿ, ಚರಣ್​, ಮಹೇಶ್​, ನಾಗೇಂದ್ರ, ವೆಂಕಟೇಶ್​, ಜಿತೇಂದ್ರ, ನಾನಿ ಇದ್ದರು.