ತಾಳಿಕೋಟೆ ಪಟ್ಟಣದ ಹಿಂದು ಮಹಾ ಗಣಪತಿ ಮಂಡಳಿ ವತಿಯಿಂದ ಧರ್ಮ ರಕ್ಷಣಾರ್ಥವಾಗಿ ಗಣಹೋಮ ಕಾರ್ಯಕ್ರಮ ನೆರವೇರಿಸಲಾಯಿತು. ವೇ.ಸಂತೋಷಭಟ್ ಜೋಶಿ, ವಿನಯಕುಮಾರ ಸ್ಥಾವರಮಠ ದಂಪತಿ ಇತರರಿದ್ದರು. 
ಜಿಲ್ಲೆ

ಹಿಂದು ಮಹಾ ಗಣಪತಿ ಮಂಡಳಿಯಿಂದ ಗಣಹೋಮ

ತಾಳಿಕೋಟೆ: ಭಾರತ ಅತ್ಯಂತ ಪವಿತ್ರವಾದ ದೇಶವಾಗಿದೆ. ಸನಾತನ ಧರ್ಮದ ನಡೆ ನುಡಿಗಳನ್ನು ಅನ್ಯ ದೇಶದವರು ಪಾಲಿಸಲು ಮುಂದಾಗುತ್ತಿದ್ದಾರೆ. ಇಂತಹ ಪವಿತ್ರ ದೇಶ ವಿಶ್ವ ಗುರುವಾಗಬೇಕೆಂಬ ಸಂಕಲ್ಪದೊಂದಿಗೆ ಗಣ ಹೋಮ ಕಾರ್ಯಕ್ರಮ ನಡೆಸಲಾಗಿದೆ ಎಂದು ಶಿವಭವಾನಿ ಮಂದಿರದ ಅರ್ಚಕ ವೇ.ಸಂತೋಷಭಟ್ ಜೋಶಿ ಹೇಳಿದರು.

ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದು ಮಹಾ ಗಣಪತಿ ಮಂಡಳಿಯಿಂದ ಪ್ರತಿಷ್ಠಾಪಿಸಿದ ಬೃಹತ್ ಗಣೇಶ ಮೂರ್ತಿ ಸ್ಥಳದಲ್ಲಿ ಶುಕ್ರವಾರ ಗಣ ಹೋಮ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ದೇಶದ ಜನರಿಗೆ ಬಂದಿರುವ ಸಕಲ ವಿಘ್ನಗಳನ್ನು ದೂರ ಮಾಡಲು ಅಂತ್ಯಂತ ಶ್ರದ್ಧಾ ಭಕ್ತಿಯೊಂದಿಗೆ ಅಂದಾಜು 3 ಗಂಟೆ ಗಣಹೋಮ ನೆರವೇರಿಸಲಾಗಿದೆ. ನಾವೆಲ್ಲರೂ ದೇಶದ ಸನಾತನ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮೈಗೂಡಿಸಿಕೊಂಡು ಜೀವಿಸೋಣ ಎಂದರು.

ವೇ.ರಾಘವೇಂದ್ರ ಉಡುಪಿ, ವೇ.ಪ್ರತೀಕ ಭಟ್, ವೇ.ಅಶೋಕ ಜೋಶಿ, ವೇ.ದೀಪಕ ಭಟ್, ವೇ.ಕಿರಣ ಆಚಾರ್ಯ ಗಣಹೋಮ ಕಾರ್ಯದ ಜತೆಗೆ ಗಣೇಶ ಮಹಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯದಲ್ಲಿ ವಿನಯಕುಮಾರ ಸ್ಥಾವರಮಠ ದಂಪತಿ ಪಾಲ್ಗೊಂಡಿದ್ದರು. ಹಿಂದು ಮಹಾ ಗಣಪತಿ ಮಂಡಳಿಯ ಕಾರ್ಯಕರ್ತರು ಉಪಸ್ಥಿತರಿದ್ದರು.