ಮಂಗಳೂರು : ಹಲಾಲ್ ಆರ್ಥಿಕ ವ್ಯವಸ್ಥೆಯಿಂದ ಭಾರತೀಯ ಅರ್ಥವ್ಯವಸ್ಥೆಗೆ ಹಾಗೂ ರಾಷ್ಟ್ರದ ಸುರಕ್ಷತೆಗೆ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾನೂನುಬಾಹಿರ ಹಲಾಲ್ ಪ್ರಮಾಣ ಪತ್ರವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಹಲಾಲ್ ಪ್ರಮಾಣಪತ್ರ ಇಂದು ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ಖಾದ್ಯ ಪದಾರ್ಥ, ಸೌಂದರ್ಯಸಾಧನಗಳು, ಔಷಧ, ಆಸ್ಪತ್ರೆ, ಗೃಹನಿರ್ಮಾಣ ಸಂಸ್ಥೆಗಳು, ಮಾಲ್‌ಗಳಿಗೂ ಅನ್ವಯಿಸಲಾಗುತ್ತಿದೆ. ವ್ಯಾಪಾರಿಗಳಿಗೆ ಅವಶ್ಯಕತೆ ಇಲ್ಲದಿದ್ದರೂ, ಪ್ರತಿ ಉತ್ಪನ್ನಕ್ಕೆ 50 ಸಾವಿರ ರೂ. ಶುಲ್ಕ ಭರಿಸಿ ಹಲಾಲ್ ಪ್ರಮಾಣಪತ್ರ ಹಾಗೂ ಅದರ ಲೋಗೋ ಖರೀದಿಸಬೇಕಿದೆ ಎಂದು ಹಿಂದು ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.