ಜಿಲ್ಲೆ

ಹಿಂದು ಧರ್ಮ ಸಂಸ್ಕೃತಿ ನಾಶ ಅಸಾಧ್ಯ

ಪ್ರಶಾಂತ ಹೂಗಾರ

ಅಥಣಿ ಗ್ರಾಮೀಣ: ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದು ಧರ್ಮ ಮತ್ತು ಸಂಸ್ಕೃತಿ ನಾಶಗೊಳಿಸುವ ಹುನ್ನಾರಕ್ಕೆ ಎಂದಿಗೂ ಜಯ ಸಿಗುವುದಿಲ್ಲ ಎಂದು ಹಂಚಿನಾಳ ಭಕ್ತಿಯೋಗಾಶ್ರಮ ಮಠದ ಮಹೇಶಾನಂದ ಸ್ವಾಮೀಜಿ ಹೇಳಿದರು.

ಅನಂತಪುರ ಗ್ರಾಮಕ್ಕೆ ಖೀಳೆಗಾಂವ ಭಕ್ತರ ದಿವ್ಯಜ್ಯೋತಿಗಳನ್ನು ಮಹೇಶಾನಂದ ಸ್ವಾಮೀಜಿ  ಬರಮಾಡಿಕೊಂಡರು. ಭೀಮು ದೇಶಿಂಗೆ, ಮೃತ್ಯಂಜಯ ಹಿರೇಮಠ, ಜಯಮ್ಮ ಬಡಿಗೇರ, ಕುಸುಮಾ ಮೈಶಾಳೆ, ಅನ್ನಪೂರ್ಣಾ ದೇಶಿಂಗೆ ಇತರರಿದ್ದರು.

ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಶ್ರಾವಣ ಮಾಸ ನಿಮಿತ್ತ ಖಿಳೇಗಾಂವ ಗ್ರಾಮದಿಂದ ಪಾದಯಾತ್ರೆ ಮೂಲಕ ಮಂಗಳವಾರ ಆಗಮಿಸಿದ ಐದು ಸಾವಿರ ದಿವ್ಯಜ್ಯೋತಿಗಳನ್ನು ಬರಮಾಡಿಕೊಂಡು ಮಾತನಾಡಿದರು. ಹಿಂದು ಧರ್ಮದಲ್ಲಿ ಅನೇಕ ವೈವಿಧ್ಯಗಳಿದ್ದರೂ ಐಕಮತ್ಯವಿದೆ ಎಂದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದಿವ್ಯಜ್ಯೋತಿಗಳ ಭವ್ಯ ಮೆರವಣಿಗೆ ಜರುಗಿತು. ಭೀಮು ದೇಶಿಂಗೆ, ಮೃತ್ಯುಂಜಯ ಹಿರೇಮಠ, ಶಿವಾನಂದ ಖೋತ, ಮಹೇಶ ಹಳ್ಯಾಳ, ಅಪ್ಪು ಕರ್ಣಿ, ಸಂಗಪ್ಪ ಜಾಬಗೌಡರ, ಓಂಪ್ರಕಾಶ ಡೊಳ್ಳಿ, ತುಕಾರಾಮ ಬಡಿಗೇರ, ಆನಂದ ಪಾಟೀಲ, ಕುಸುಮಾ ಮೈಶಾಳೆ, ಜಯಶ್ರೀ ಪಡಸಲಗಿ, ಅನ್ನಪೂರ್ಣಾ ದೇಶಿಂಗೆ, ಮಹಾದೇವಿ ಮಠಪತಿ, ಶೋಭಾ ಮಾಳಿ, ಮಹಾದೇವ ಬಿಳ್ಳೂರ, ಅಶೋಕ ಪಾಟೀಲ ಇತರರಿದ್ದರು.